ಮಂಗಳೂರು: ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ಮೇ.22ರ ಸೋಮವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ವಿಭಾಗಗಳನ್ನು ತೆರೆಯಲಾಗುವುದು.
ಅಂದು ಮೃಗಾಲಯ, ಪ್ರಾದೇಶಿಕ ವಿಜ್ಞಾನಕೇಂದ್ರ, ತಾರಾಲಯ, ಲೇಕ್‍ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮ (ಕುಶಲಕರ್ಮಿ ಗ್ರಾಮ ಹೊರತುಪಡಿಸಿ) ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ