ಮಂಗಳೂರು: ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗಳಿಗೆ ದಾಖಲಿಸಲು ಇದೇ ಮೇ.25ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.
ಶಾಲಾ ವಿವರ:
ನಗರದ ಕೊಡಿಯಾಲ್‍ಬೈಲ್ ನ ಶಾರದಾ ವಿದ್ಯಾಲಯ, ಬಂಟ್ವಾಳ ತಾಲೂಕಿನ ಪುಣ್ಯಕೋಟಿ ನಗರದಲ್ಲಿರುವ ಶಾರದಾ ಗಣಪತಿ ವಿದ್ಯಾಕೇಂದ್ರ, ಬಂಟ್ವಾಳ ತಾಲೂಕಿನ ಮಾಣಿಯಲ್ಲಿರುವ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ ತಾಲೂಕಿನ ವಿಟ್ಲದ ಬಸವನಗುಡಿಯಲ್ಲಿರುವ ವಿಟ್ಲ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ ತಾಲೂಕಿನ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ ಹಳೆಕೋಟೆಯಲ್ಲಿರುವ ವಾಣಿಇಂಗ್ಲೀಷ್‍ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ ಮಡಂತ್ಯಾರುನಲ್ಲಿರುವ ಸೆಕ್ರೇಡ್ ಹಾಟ್ಸ್ ಪದವಿ ಪೂರ್ವಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರತಿಷ್ಠಿತ ಶಾಲೆಗಳಿಗೆ ದಾಖಲು ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಮತ್ತು ಷರತ್ತು:
ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕಆದಾಯವು 2ಲಕ್ಷ ರೂ.ಗಳಿಗೆ ಮೀರಿರಬಾರದು.(2022-23ನೇ ಸಾಲಿನ ಆದಾಯ ಪ್ರಮಾಣ ಪತ್ರ ಲಗತ್ತೀಕರಿಸಬೇಕು), 2 ಪಾಸ್‍ಪೋರ್ಟ್ ಸೈಜ್ ಭಾವಚಿತ್ರ. 5ನೇ ತರಗತಿಯಲ್ಲಿ ಶೇ.60% ಅಂಕ ಪಡೆದಿರಬೇಕು. ದಕ್ಷಿಣಕನ್ನಡ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಮಾತ್ರ ಅಂದರೆ, ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ ಅವಕಾಶ ಕಲ್ಪಿಸುವುದು. ಬಾಲಕ ಇಲ್ಲದಿದ್ದಲ್ಲಿ ಇಬ್ಬರು ಬಾಲಕಿಯರಿಗೆ ಅವಕಾಶ ನೀಡಲಾಗುವುದು.
ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಆಯಾಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದು, ಸಹಾಯಕ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆಯವರು ಅರ್ಜಿಗಳನ್ನು ಪರಿಶೀಲನೆ ಮಾಡಿದ ಬಳಿಕ ಯೋಜನಾ ಸಮನ್ವಯಾಧಿಕಾರಿ, ಐ.ಟಿ.ಡಿ.ಪಿ.ಕಚೇರಿ, ಅಶೋಕನಗರ ಅಂಚೆ, ಮಂಗಳೂರು-575006 ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಐ.ಟಿ.ಡಿ.ಪಿ.ಕಚೇರಿಯ ದೂ.ಸಂಖ್ಯೆ: 0824-2451269 ಸಂಪರ್ಕಿಸುವಂತೆ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ