ಮಂಗಳೂರು: ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ನೀಡಲುಆನ್ ಲೈನ್ ಮೂಲಕ ಪ್ರಸ್ತಾವನೆ/ಶಿಫಾರಸುಗಳನ್ನು ಆಹ್ವಾನಿಸಲಾಗಿದ್ದು, ನಾಮ ನಿರ್ದೇಶನ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, 2023ರ ಸೆಪ್ಟಂಬರ್ 15ರೊಳಗೆ ಸಲ್ಲಿಸಬಹುದಾಗಿದೆ.
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಕಾರ್ಯ, ವಿಜ್ಞಾನ ಮತ್ತುಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕರಂತಹ ಎಲ್ಲಾ ಕ್ಷೇತ್ರಗಳಲ್ಲಿ,ವಿಭಾಗಗಳಲ್ಲಿ ವಿಶಿಷ್ಟವಾದ ಮತ್ತುಅಸಾಧಾರಣ ಸಾಧನೆಗಳು,ಸೇವೆ ಮಾಡಿರುವ ಎಲ್ಲಾ ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಪದ್ಮ ಪ್ರಶಸ್ತಿಗೆ ಆನ್‍ಲೈನ್ ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ https://awards.gov.in ನಲ್ಲಿ ನಾಮನಿರ್ದೇಶನಗಳು/ಶಿಫಾರಸುಗಳನ್ನು ಸ್ವೀಕರಿಸಲಾಗುವುದು. ಈ ಪ್ರಶಸ್ತಿಗಳನ್ನು ನಿಯಂತ್ರಿಸುವ ಕಾನೂನುಗಳು ಮತ್ತು ನಿಯಮಗಳ ಪ್ರತಿಯು ವೆಬ್‍ಸೈಟ್ ವಿಳಾಸ https://padmaawards.gov.inನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ