ಮಂಗಳೂರು: ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಅಂಗವಾಗಿ ಮೇ.18ರ ಗುರುವಾರಪ್ರಾಚ್ಯ ವಸ್ತುಗಳ ಒಂದು ದಿನದ ವಿಶೇಷ ಪ್ರದರ್ಶನವನ್ನುನಗರದ ಬಿಜೈನಲ್ಲಿರುವ ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘದ ಸದಸ್ಯರಿಂದ ಈ ವಿಶೇಷ ಪ್ರದರ್ಶನ ನಡೆಯಿತು.
ಪ್ರದರ್ಶನವನ್ನು ರಾಮಕೃಷ್ಣಕಾಲೇಜಿನ ಪ್ರಾಂಶುಪಾಲ ಪ್ರೋ.ಬಾಲಕೃಷ್ಣ ಶೆಟ್ಟಿಅವರು ಉದ್ಘಾಟಿಸಿದರು.ವಿವಿಧ ದೇಶಗಳ ಕರೆನ್ಸಿ ಹಾಗೂ ವಿವಿಧ ಬಗೆಯ ಉಪಕರಣಗಳು,ಕಿಟೆಲ್‍ರವರ ಕನ್ನಡ -ಇಂಗ್ಲೀಷ್‍ಡಿಕ್ಷನರಿ ಸೇರಿದಂತೆ ಹಲವು ಮಹತ್ತರ ವಸ್ತುಗಳು ಪ್ರದರ್ಶನದಲ್ಲಿದ್ದವು.
ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘದ ಸದಸ್ಯರಾದ ಬೈಕಾಡಿ ಶ್ರೀನಿವಾಸ ರಾವ್,ವೆಂಕಟೇಶ್ ಪ್ರಭು,ಸಂತೋಷ್ ಪ್ರಭು, ಶಿವ ಕುಮಾರ, ಪ್ರಭಾಕರ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಧನಲಕ್ಷ್ಮಿ ಅಮ್ಮಾಳ್ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ