ಅಂತರಾತ್ಮದಲ್ಲಿ ಭಗವಂತನ ಅನುಷ್ಠಾನದಿಂದ ದೇವರ ನಿಜವಾದ ಶಕ್ತಿ ಗೋಚರ: ಮಾಣಿಲ ಶ್ರೀ

Upayuktha
0

 ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ ಸಂಪನ್ನ



ಕುಲಶೇಖರ: ದೇವರ ಮೇಲೆ, ಭಯ ಭಕ್ತಿ ಬೇಕು. ಹಿಂದೂ ಸಮಾಜ ಭಾವನೆಗಳ ಮೇಲೆ ನಿಂತಿದ್ದು, ಅಂತರಾತ್ಮದಲ್ಲಿ ಭಗವಂತನ ಅನುಷ್ಠಾನದಿಂದ ದೇವರ ನಿಜವಾದ ಶಕ್ತಿ ಗೋಚರವಾಗುತ್ತದೆ. ನಿರ್ಮಾಣದ ಕುಲಶೇಖರ ಕ್ಷೇತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇಡೀ ಹಿಂದೂ ಸಮಾಜಕ್ಕಿದೆ ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಅವರು ಮೇ 14ರಿಂದ ಮೊದಲ್ಗೊಂಡು 25ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ಸಂಜೆ ಜರಗಿದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 

ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವೇ|ಮೂ| ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿದರು.

ಕದ್ರಿ ಕ್ಷೇತ್ರದ ವಿಠಲದಾಸ ತಂತ್ರಿ ಆಶೀರ್ವಚನ ನೀಡಿ, ಧಾರ್ಮಿಕ ಶಿಕ್ಷಣ ಬಾಲ್ಯದಿಂದಲೇ ಕಡ್ಡಾಯ ಆಗಬೇಕು.  ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು. ದೇಗುಲಗಳನ್ನು ನಿರ್ಣಾಮ ಆಗದಂತೆ ಉಳಿಸಿಕೊಳ್ಳುವುದೇ ಬ್ರಹ್ಮಕಲಶ. ದೇಶಭಕ್ತಿಗಿಂತ ಜಾಸ್ತಿ ಧರ್ಮಭಕ್ತಿ ಬೇಕು. ರಾಜಕೀಯದಲ್ಲಿ ಧರ್ಮ, ಧರ್ಮದಲ್ಲಿ ರಾಜಕೀಯ ಬರಬಾರದು. ಪೂಜೆ ಪುರಸ್ಕಾರ ಮಾಡುವ ಹಕ್ಕು ಜಾತಿಗೆ ಸೀಮಿತವಾಗಿಲ್ಲ. ಕುಲಾಲ ಸಮುದಾಯದ ಶಿಖರಪ್ರಯವಾಗಿರುವ ಈ ಕ್ಷೇತ್ರ ಮತ್ತಷ್ಟು ಬೆಳಗಲಿ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಎಲ್ಲರು ಧಾರ್ಮಿಕಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್‌ನ ಸುನೀಲ್ ಆಚಾರ್,  ನಟ ರೂಪೇಶ್ ಶೆಟ್ಟಿ, ಉದ್ಯಮಿ ಕರುಣಾಕರಣ್, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದೀಪ್ ಕುಮಾರ್ ಕಲ್ಕೂರ, ವಾಸುದೇವ ಬಂಜನ್ ಮುಂಬೈ, ಈಶ್ವರ ಮೂಲ್ಯ ಬೆಂಗಳೂರು, ರಾಮಪ್ಪ ಪಕ್ಕಳ, ಹರಿಯಪ್ಪ ಕುಲಾಲ್ ಮುಂಬೈ, ಉದ್ಯಮಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಬೆಂಗಳೂರಿನ ಉದ್ಯಮಿ ಸೌಂದರ್ಯ ರಮೇಶ್, ಡಾ. ನವೀನ್‌ಚಂದ್ರ ಕುಲಾಲ್, ರಥಬೀದಿ ವೆಂಕಟರಮಣ ದೇವಸ್ಥಾನದ ಎಂ. ಸತೀಶ್ ಪ್ರಭು, ಗೌತಮ್ ಸಾಲ್ಯಾನ್ ಕೋಡಿಕಲ್, ಕೆ. ಕೃಷ್ಣಪ್ಪ ಕುಲಾಲ್ ಪೆರ್ಡೂರು, ಶೈಲೇಶ್ ನೆಟ್ಟಾರು ಸುಳ್ಯ, ಆನಂದ ಉರ್ವ, ಗೋಪಾಲ ಮೂಲ್ಯ ನಾನಿಲ್ತಾರ್, ಹರೀಶ್ ಮೂಲ್ಯ, ಪ್ರತಿಭಾ ಕುಳಾಯಿ, ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಪುರುಷೋತ್ತಮ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಬಿ. ದಿನೇಶ್ ಕುಲಾಲ್, ಮಾಧವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್ ಸ್ವಾಗತಿಸಿ, ಮಯೂರ್ ಉಳ್ಳಾಲ್ ಪ್ರಾಸ್ತಾವಿಸಿದರು.


ಸಮ್ಮಾನ

ಸುಮಂಗಲ ಸುನೀಲ್ ದಂಪತಿ, ಉದ್ಯಮಿ ಸೌಂದರ್ಯ ರಮೇಶ್, ಡಾ. ನವೀನ್ ಕುಲಾಲ್ ಮಂಗಳೂರು, ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಪೆರ್ಡೂರು, ರಾಮಪ್ಪ ಕುಲಾಲ್ ಪೆರ್ಡೂರು, ಜಯಂತ್ ಬೆಂಗಳೂರು, ರಾಜೇಶ್ ಪೂಜಾರಿ ಕೋಡಿಕಲ್, ವಿ. ಕರುಣಾಕರ ಮಂಗಳೂರು, ನವೀನ್‌ಚಂದ್ರ, ತಿಮ್ಮಪ್ಪ ಸಾಲ್ಯಾನ್, ರಘು ಎ. ಮೂಲ್ಯ ಮುಂಬೈ, ಸರಿತಾ ಲೋಕನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.


ಸಮುದಾಯದ ಅಭ್ಯುದಯದ ಪ್ರತೀಕವಾಗಿ ವೀರನಾರಾಯಣ ಕ್ಷೇತ್ರದ ಪುನರ್ ನಿರ್ಮಾಣ ಆಗಿದೆ. ದಾನಿಗಳು, ಮುಂಬೈ ದಾನಿಗಳ ಸಹಕಾರದಲ್ಲಿ ದೂರದೃಷ್ಠಿತ್ವ ಇತ್ತು. ಹಿರಿಯರು ತಪಸ್ಸಿನ ಅಸ್ಮಿರತೆಯ ಪ್ರತಿಬಿಂಬದಂತೆ ದೇಗುಲ ನಿರ್ಮಾಣ ಆಗಿದೆ. ದುರ್ಬಲ ಸಮುದಾಯ ಎಂಬ ಮಾತಿಗೆ ವಿರುದ್ಧವಾಗಿ ಒಗ್ಗಟ್ಟು, ಸಾಹಸಶೀಲರು ಅನ್ನುವುದನ್ನು ಕುಲಾಲರು ತೋರಿಸಿಕೊಟ್ಟಿದ್ದಾರೆ. ೨ ವರ್ಷದೊಳಗೆ ವಿದ್ಯಾರ್ಥಿನಿ ನಿಲಯ, ಕುಲಾಲರ ಜನಗಣತಿ, ಮುಂಬೈ ಕುಲಾಲ ಸಂಘದ ಸಹಕಾರದೊಂದಿಗೆ ಬಡ ಹೆಣ್ಣುಮಕ್ಕಳ ವಿವಾಹ, ಕ್ಷೇತ್ರದಲ್ಲಿ ವರ್ಷಕ್ಮೊಮ್ಮೆ ಓಕುಳಿ ಹಬ್ಬ ಮುಂತಾದ ಕಾರ್ಯಯೋಜನೆ ಮಾತೃಸಂಘದಲ್ಲಿದೆ.

-ಮಯೂರ್ ಉಳ್ಳಾಲ್, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top