ಕರಾವಳಿ ಕರ್ನಾಟಕಕ್ಕೆ ಮ್ಯಾಗ್ನಿಫ್ಲೆಕ್ಸ್ ಲಗ್ಗೆ, ಉಡುಪಿಯಲ್ಲಿ ನೂತನ ಮಳಿಗೆ ಆರಂಭ

Upayuktha
0

ಉಡುಪಿ/ ಮಂಗಳೂರು: ತನ್ನ ವಿಲಾಸಿ ಮ್ಯಾಟ್ರೆಸ್‍ಗಳು ಮತ್ತು ನಿದ್ರೆಯ ಪರಿಕರಗಳಿಗೆ ಯುರೋಪ್‍ನಲ್ಲಿ ಖ್ಯಾತಿ ಗಳಿಸಿರುವ ಮುಂಚೂಣಿ ಇಟಾಲಿಯನ್ ಮ್ಯಾಟ್ರೆಸ್ ಬ್ರಾಂಡ್‍ಗಳಲ್ಲಿ ಒಂದಾಗಿರುವ ಮ್ಯಾಗ್ನಿಫ್ಲೆಕ್ಸ್ ಇಂಡಿಯಾ ಉಡುಪಿಯಲ್ಲಿ ತನ್ನ ಪ್ರಥಮ ಮಳಿಗೆ ಆರಂಭಿಸಿದೆ.


60 ವರ್ಷಕ್ಕೂ ಹೆಚ್ಚಿನ ಪರಂಪರೆ ಹೊಂದಿರುವ ಮ್ಯಾಗ್ನಿಫ್ಲೆಕ್ಸ್ ತನ್ನ ಗುಣಮಟ್ಟ ಮತ್ತು ಕರಕುಶಲತೆಗೆ ಹೆಸರಾಗಿದೆ. ಈ ನೂತನ ಮಳಿಗೆಯೊಂದಿಗೆ ಬ್ರಾಂಡ್ ಕರಾವಳಿ ಕರ್ನಾಟಕದಲ್ಲಿ ತನ್ನ ಹೆಜ್ಜೆಗುರುತು ವಿಸ್ತರಿಸಿದೆ ಎಂದು ಮ್ಯಾಗ್ನಿಫ್ಲೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಆನಂದ್ ನಿಚಾನಿ ಹೇಳಿದ್ದಾರೆ.


ಕುಟುಂಬದ ಪ್ರತಿ ಸದಸ್ಯರ ಬೇರೆ ಬೇರೆ ಅಗತ್ಯಗಳನ್ನು ಪೂರೈಸುವ ಮ್ಯಾಟ್ರೆಸ್‍ಗಳ ಶ್ರೇಣಿಯನ್ನು ಮ್ಯಾಗ್ನಿಫ್ಲೆಕ್ಸ್ ಸಾದರಪಡಿಸುತ್ತಿದೆ. ಅತ್ಯುತ್ತಮ ಮಾರಾಟವಾಗುವ ಉತ್ಪನ್ನಗಳಲ್ಲಿ ಒಂದಾಗಿರುವ ಮ್ಯಾಗ್ನಿಸ್ಟ್ರೆಚ್ ಸ್ಪೈನ್ ಕೇರ್ ಮ್ಯಾಟ್ರೆಸ್ ತನ್ನ ಪೇಟೆಂಟ್ ಪಡೆದಿರುವ ವಸ್ತುಗಳು ಮತ್ತು ಮೆಮೋಫಾರಂ ಪದರಗಳನ್ನು ಹೊಂದಿರುವುದಲ್ಲದೆ, ಜಾಗತಿಕವಾಗಿ ಆರೋಗ್ಯ ಪರಿಣತರಿಂದ ಮಾನ್ಯತೆ ಪಡೆದಿದ್ದು, ಈ ಉತ್ಪನ್ನ ಈಗ ನಮ್ಮ ನೂತನ ಮಳಿಗೆಯಲ್ಲಿ ಲಭ್ಯವಿರುತ್ತದೆ. ಮಂಗಳೂರು, ಶಿವಮೊಗ್ಗ ಸೇರಿದಂತೆ ದೇಶಾದ್ಯಂತ ಮ್ಯಾಗ್ನಿಫ್ಲೆಕ್ಸ್ 69 ಮಳಿಗೆಗಳನ್ನು ಹೊಂದಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top