ಕುಲಶೇಖರ ಶ್ರೀ ವೀರನಾರಾಯಣ ದೇವರಿಗೆ ಬಣ್ಣದ ಓಕುಳಿ ಸಂಭ್ರಮ

Upayuktha
0

ಅರಸಿನದ ಹೋಳಿ ನೀರಿನಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಭಕ್ತರು!


ಕುಲಶೇಖರ: ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವರ ಅಷ್ಠಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಓಕುಳಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.


ನೀರಿನ ಓಕುಳಿಯಲ್ಲಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರಿನವರು ಸೇರಿದಂತೆ ಹಲವಾರು ಮಂದಿ ಪರಸ್ಪರ ಬಣ್ಣದ ನೀರನ್ನು ಎರಚಾಡಿಕೊಳ್ಳುವ ಹಾಗೂ ತಮಟೆ ಶಬ್ದ ಹಾಗೂ ಚಿತ್ರದ ಹಾಡಿಗೆ ಕುಣಯುವ ಮೂಲಕ ಸಂಭ್ರಮಿಸಿದರು. 

ಬಣ್ಣಗಳ ಹಬ್ಬ ಹೋಳಿ ಹಬ್ಬ ಉಲ್ಲಾಸ ತರುವ ಬಣ್ಣಗಳ ಎರಚಾಟದ ಮನೋರಂಜನೆಯ ನಂತರ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸಿದರು.


ವಿವಿಧ ಬಣ್ಣಗಳ ಓಕುಳಿ ಹಾರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬ ಇದು. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ. 


ವಿಶೇಷ ಮಹತ್ವವಿದೆ

ಹಿರಿಯರು, ಕಿರಿಯರು, ಮಕ್ಕಳು ಸೇರಿದಂತೆ ಅರಸಿನ ಮತ್ತು ಬಣ್ಣಬಣ್ಣದ ಓಕುಳಿ ನೀರನ್ನು ಎರಚಿ ಕುಣಿದು ಕುಪ್ಪಳಿಸುವ ಸಂಪ್ರದಾಯವಿದೆ. ಮಹಿಳೆಯರು, ಮಕ್ಕಳು, ಯುವತಿಯರು ಓಕುಳಿ ನೀರನ್ನು ಮೈಮೇಲೆ ಹಾಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಹೀಗೆ ಅರಸಿನದ ನೀರು ಮೈಮೇಲೆ ಬಿದ್ದರೆ ಯಾವುದೇ ರೋಗ ರುಜಿನಗಳಿದ್ದರೂ ವಾಸಿಯಾಗುತ್ತದೆ ಮತ್ತು ಯುವತಿಯರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ, ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ದೊರೆಯುತ್ತದೆ ಅನ್ನುವ ನಂಬಿಕೆ ವ್ಯಾಪಕವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top