ಸುಗಂಧಭರಿತ ಔಷಧ ಕಾಮಕಸ್ತೂರಿ - ಮನೆಮದ್ದು

Upayuktha
0

 


ಕಾಮಕಸ್ತೂರಿ ಗಿಡವು ತುಳಸಿಯನ್ನೇ ಹೋಲುವಂಥದ್ದು. ಪ್ರಾಚೀನಕಾಲದಿಂದಲೂ ಇದನ್ನು ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧರೂಪದಲ್ಲಿ ಬಳಸುತ್ತಾರೆ. ದೇಹಕ್ಕೆ ತಂಪನ್ನು ನೀಡುವ ಇದನ್ನು ಸುಗಂಧದ್ರವ್ಯಗಳ ತಯಾರಿಯಲ್ಲಿಯೂ ಉಪಯೋಗಿಸುತ್ತಾರೆ. ಇದನ್ನು ಹೆಚ್ಚಾಗಿ ಮನೆಯಂಗಳದಲ್ಲಿ, ತೋಟಗಳಲ್ಲಿ ಬೆಳೆಸುತ್ತಾರೆ. ತುಂಬ ಸುವಾಸನೆಯನ್ನು ಹೊಂದಿರುವ ಕಾಮಕಸ್ತೂರಿ ಬೀಜವು ಕೊಬ್ಬು, ಕಬ್ಬಿಣ ಮತ್ತು ನಾರಿನಂಶವುಳ್ಳದ್ದು. ಇದರ ವೈಜ್ಞಾನಿಕ ಹೆಸರು Ocimum basilicum.


ಕಾಮಕಸ್ತೂರಿ ಎಲೆಗಳ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತ, ಜ್ವರ ಹತೋಟಿಗೆ ಬರುತ್ತದೆ. ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಬಹುದು. ಕಾಮಕಸ್ತೂರಿ ಎಲೆಯ ಸ್ವಲ್ಪ ರಸವನ್ನು ಸೇರಿಸಿದ ನೀರಿನಿಂದ ನಿಯತವಾಗಿ ಸ್ನಾನ ಮಾಡಿದರೆ ದೇಹದ ದುರ್ಗಂಧ ದೂರವಾಗುತ್ತದೆ. ರಾತ್ರಿ ನೆನೆಸಿದ ಕಾಮಕಸ್ತೂರಿ ಬೀಜಗಳಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ರಕ್ತಭೇದಿ ಕ್ರಮೇಣ ಕಡಿಮೆಯಾಗುತ್ತದೆ.


ಚೆನ್ನಾಗಿ ನೆನೆಸಲಾದ ಕಾಮಕಸ್ತೂರಿ ಬೀಜಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿದಿನ ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಾಮಕಸ್ತೂರಿಯ ಹಸಿ ಎಲೆಗಳನ್ನು ಅರೆದು ರಸ ತೆಗೆದು ಸೋಸಿ ಆ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ.


ಕಾಮಕಸ್ತೂರಿಯ ಹೂವುಗಳನ್ನು ನೀರಿನಲ್ಲಿ ಅರೆದು ಸೋಸಿಕೊಂಡು ಸ್ವಲ್ಪ ಜೇನುತುಪ್ಪ ಬೆರೆಸಿ, ಅರ್ಧ ಗಂಟೆಗೊಮ್ಮೆ ಅರ್ಧ ಚಮಚ ರಸ ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಜರುಗುತ್ತದೆ. ಕಾಮಕಸ್ತೂರಿಯು ಫ್ಲೇವನಾಯ್್ಡ್ಸ ಅಂಶ ಹೊಂದಿದ್ದರಿಂದ ನೆನೆಸಿದ ಅದರ ಬೀಜಕ್ಕೆ ಹಾಲು ಮತ್ತು ಜೇನುತುಪ್ಪ ಸೇರಿಸಿ ತಂಪುಪಾನೀಯದಂತೆ ಬಳಸಬಹುದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಸಂಗ್ರಹ:- ನಾಗರತ್ನಯ್ಯ ವಜ್ಜನಕುರಿಕೆ ನಾಗಣ್ಣ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top