ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 'ಜೀವನ ಬೋಧ' ನಾಲ್ಕು ದಿನಗಳ ಶಿಬಿರ

Upayuktha
0

 


ಬದಿಯಡ್ಕ: ಶ್ರೀರಾಮಚಂದ್ರಾರಪುರಮಠ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ 4 ದಿನಗಳ ಬೇಸಿಗೆ ಶಿಬಿರ `ಜೀವನಬೋಧ 23'ಕ್ಕೆ ಚಾಲನೆ ನೀಡಲಾಯಿತು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಆರಂಭಗೊಂಡ ಶಿಬಿರದಲ್ಲಿ ಹಾಲಿಗೆ ಮಜ್ಜಿಗೆಯನ್ನು ಬೆರೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಹಾಗೂ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಉದ್ಘಾಟಿಸಿದರು. 


ಹಾಲು ಮಜ್ಜಿಗೆಯ ಮಿಶ್ರಣದ ಭರಣಿಯನ್ನು ಮಾತೃವಿಭಾಗಕ್ಕೆ ಹಸ್ತಾಂತರಿಸಲಾಯಿತು. ಮಾತೃತ್ವಮ್‌ನ ಈಶ್ವರಿ ಬೇರ್ಕಡವು, ಗೀತಾಲಕ್ಷ್ಮೀ ಮುಳ್ಳೇರಿಯ, ಕುಸುಮ ಪೆರ್ಮುಖ, ವಿದ್ಯಾಗೌರಿ ಉಪ್ಪಂಗಳ, ಡಾ| ವೈ.ವಿ.ಕೃಷ್ಣಮೂರ್ತಿ, ಕೆ.ಎನ್.ಭಟ್ ಬೆಳ್ಳಿಗೆ ಜೊತೆಗಿದ್ದರು. ಶಿಬಿರದ ಸಂಯೋಜಕ ಶ್ಯಾಮಪ್ರಸಾದ ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ 4 ದಿನಗಳ ಶಿಬಿರದ ಕುರಿತು ವಿವರಣೆ ನೀಡಿದರು. 


ಸಂಸ್ಕಾರ, ಜೀವನಶೈಲಿಯನ್ನು ರೂಪಿಸುವ, ಮನಸ್ಸಿನ ಭಾವಗಳು, ನಾಯಕತ್ವ ತರಬೇತಿ, ಒತ್ತಡ ನಿರ್ವಹಣೆ, ಹೊಂದಾಣಿಕೆ, ಮನುಜನ ಬದುಕಿಗೆ ಅಗತ್ಯವಿರುವ ಎಲ್ಲಾ ವಿಚಾರಗಳನ್ನೊಳಗೊಂಡು ಶಿಬಿರವು ನಡೆಯಲಿದೆ ಎಂದರು. ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಶ್ಯಾಮಕೃಷ್ಣ ಪ್ರಕಾಶ ಮುಂಡೋಳುಮೂಲೆ, ಕೇಶವಪ್ರಕಾಶ ಮುಣ್ಚಿಕ್ಕಾನ, ಗೋವಿಂದ ಬಳ್ಳಮೂಲೆ, ಹರಿಪ್ರಸಾದ ಪೆರ್ಮುಖ, ಕೇಶವ ಪ್ರಸಾದ ಎಡೆಕ್ಕಾನ, ಟಿ.ಕೃಷ್ಣಪ್ರಸಾದ, ಗುರಿಕ್ಕಾರರು, ವಿವಿಧ ವಲಯಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸೌಮ್ಯಾ ಶರ್ಮ ಕೋಳಾರಿಯಡ್ಕ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top