ಪ್ರಜಾಪ್ರಭುತ್ವದಲ್ಲಿ
ಪ್ರಜಾ ನಾಯಕನೆಂದು
ಯಾರೂ ಮೆರೆಯಬಾರದು
ಪ್ರಜೆಗಳೇ ನಾಯಕರೆಂಬುದು
ಮರೆಯಬಾರದು
ಒಂದೊಂದು ಮತಕ್ಕೂ
ಇರುತ್ತದೆ ಮಹತ್ವ
ಏಕೆಂದರೆ ಇಲ್ಲಿರುವುದು
ಪ್ರಜಾಪ್ರಭುತ್ವ
ರಾಜಕೀಯದಾಟದಲ್ಲಿ
ಚುನಾವಣೆಯೇ ಮೈದಾನ
ಅಭ್ಯರ್ಥಿ ಆಟದ ಚೆಂಡು
ಸೋಲು ಗೆಲುವಿನ
ಸರದಾರರು
ಮಾನ್ಯ ಮತದಾರರು
ಮತದಾರ
ರಾಜಕಾರಣಿ ನಡುವೆ
ಎಷ್ಟೊಂದು ಅಂತರ
ಇರುತ್ತದೆ ಕಾಯ್ದು ನೋಡಿ
ಅದು ಚುನಾವಣೆ ನಂತರದಲಿ
ಆದರೂ ಮತದಾನ ಮಾಡಿ
ಉತ್ತಮ ಆಯ್ಕೆ ನಮ್ಮದಾಗಿರಲಿ
-ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ