ಮಂಗಳೂರು: ಕಣಚೂರು ಮೈದಾನದಲ್ಲಿ ಐಪಿಎಲ್ ಫ್ಯಾನ್ ಪಾರ್ಕ್

Chandrashekhara Kulamarva
0


ಮಂಗಳೂರು: ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್‍ನ ಡಿಜಿಟಲ್ ಹಕ್ಕುದಾರ ಜಿಯೋ ಸಿನಿಮಾ, ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‍ಗೆ ಅಭಿಮಾನಿಗಳನ್ನು ಆಹ್ವಾನಿಸಿದೆ. ದೇರಳಕಟ್ಟೆ ಕೋಟೆಕಾರ್‍ನ ತೊಕ್ಕೊಟ್ಟು- ಕೋಣಾಜೆ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‍ನಲ್ಲಿ ಮೇ 21ರಂದು ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪಂದ್ಯಗಳ ನೇರಪ್ರಸಾರ ವೀಕ್ಷಿಸಬಹುದು.


ಅಂದು ಮಧ್ಯಾಹ್ನ 3.30ರಿಂದ ಮುಂಬೈ ಇಂಡಿಯನ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ನಡುವೆ ಮತ್ತು ರಾತ್ರಿ 7.30 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿರುವ ಪಂದ್ಯಗಳನ್ನು ಮಂಗಳೂರಿನ ಫ್ಯಾನ್ ಪಾರ್ಕ್‍ನಲ್ಲಿ ಜಿಯೋಸಿನಿಮಾ ನೇರಪ್ರಸಾರ ಮಾಡಲಿದೆ. ಭಾನುವಾರ ಮಧ್ಯಾಹ್ನ 1.30ರಿಂದ ಫ್ಯಾನ್ ಪಾರ್ಕ್‍ನ ಗೇಟುಗಳು ತೆರೆಯಲಿವೆ ಎಂದು ಜಿಯೊ ಪ್ರಕಟಣೆ ಹೇಳಿದೆ.


ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‍ಗೆ ಪ್ರವೇಶ ಉಚಿತವಾಗಿರುತ್ತದೆ ಮತ್ತು ಅಭಿಮಾನಿಗಳು ದೈತ್ಯ ಎಸಿಡಿ ಪರದೆಗಳಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್ ಮೂಲಕ ನೇರ ಪ್ರಸಾರ ಆಸ್ವಾದಿಸಬಹುದು. ವಿಶೇಷವಾಗಿ ಮೀಸಲಾದ ಕುಟುಂಬ ವಲಯ, ಮಕ್ಕಳ ವಲಯ, ಆಹಾರ ಮತ್ತು ಪಾನೀಯಗಳು ಮತ್ತು ಜಿಯೋ ಸಿನಿಮಾ ಅನುಭವ ವಲಯ ಸೇರಿದಂತೆ ಎಲ್ಲ ವಯಸ್ಸಿನ ಜನರಿಗೆ ಅತ್ಯಾಕರ್ಷಕ ಕೊಡುಗೆಗಳ ಒಂದು ಶ್ರೇಣಿಯ ಜೊತೆಗೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯೊಂದಿಗೆ ಆನಂದಿಸಲು ಫ್ಯಾನ್ ಪಾರ್ಕ್‍ಗಳು ಉತ್ತಮ ಕೌಟುಂಬಿಕ ಅನುಭವ ನೀಡಲಿದೆ.


ಜಿಯೋ ಸಿನಿಮಾದಲ್ಲಿನ ಟಾಟಾ ಐಪಿಎಲ್‍ನ ನೇರಪ್ರಸಾರವು ಈಗಾಗಲೇ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ. ಏಪ್ರಿಲ್ 17ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ದಾಖಲೆಯ 2.4 ಕೋಟಿ ವೀಕ್ಷಣೆ ಕಂಡಿದೆ. ಇದು ಈ ಋತುವಿನ ಟಾಟಾ ಐಪಿಎಲ್‍ನಲ್ಲಿ ಗರಿಷ್ಠ ವೀಕ್ಷಣೆ ಕಂಡ ಪಂದ್ಯವಾಗಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top