ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಂತ್ರಜ್ಞಾನ ಮಹಾವಿದ್ಯಾಲಯದ ವಾರ್ಷಿಕ ರಾಷ್ಟ್ರೀಯ ತಂತ್ರಜ್ಞಾನ-ಸಾಂಸ್ಕೃತಿಕ ಉತ್ಸವ (ಟೆಕ್ನೋ ಕಲ್ಚರಲ್ ಫೆಸ್ಟ್) - ಆನಾದ್ಯಂತ-2023- ನಾಳೆ ಬೆಳಗ್ಗೆ (ಮೇ 19) 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಖ್ಯಾತ ಸಂಗೀತ ನಿರ್ದೇಶಕ, ಗಾಯಕ, ಗೀತರಚನೆಕಾರ ಹಾಗೂ ನಟರಾಗಿರುವ ವಾಸುಕಿ ವೈಭವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‌ಇಟಿ ಆಡಳಿತಾಧಿಕಾರಿ ರೋಹಿತ್ ಪೂಂಜಾ ವಹಿಸಲಿದ್ದಾರೆ.
ಎನ್‌ಇಟಿ ಆಡಳಿತಾಧಿಕಾರಿ ಡಾ. ಅಶ್ವಿತಾ ಪೂಂಜಾ, ಎನ್‌ಇಟಿ ಶೈಕ್ಷಣಿಕ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ, ಎನ್‌ಎಂಐಟಿ ಪ್ರಿನ್ಸಿಪಾಲ್ ಡಾ. ಎಚ್.ಸಿ ನಾಗರಾಜ್, ಎನ್‌ಎಂಐಟಿ (ಶೈಕ್ಷಣಿಕ) ಡೀನ್ ಡಾ. ವಿ. ಶ್ರೀಧರ್, ಎನ್‌ಎಂಐಟಿ ಡೀನ್ (ಎಂಬಿಎ) ಪ್ರೊ. ಎಸ್.ನಾಗೇಂದ್ರ, ಎನ್‌ಎಂಐಟಿ (ಆರ್&ಡಿ) ಡೀನ್ ಡಾ. ಕಿರಣ್ ಐತಾಳ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಫ್ಯಾಕಲ್ಟಿ ಅಡ್ವೈಸರ್ ಡಾ. ರಾಮಚಂದ್ರ ಎ.ಸಿ, ಡೀನ್ (ಇಂಟರ್‌ನ್ಯಾಷನಲ್ ರಿಲೇಶನ್ಸ್) ಡಾ> ಸುಧೀರ್ ರೆಡ್ಡಿ ಜೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನೆ ವಿಭಾಗದ ಡೀನ್ ಡಾ. ನಳಿನಿ ಎನ್ ಅವರ ತಂಡ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ