ನಿಟ್ಟೆ ತಾಂತ್ರಿಕ ಕಾಲೇಜಿನ ಏರೋ ಕ್ಲಬ್ ತಂಡಕ್ಕೆ ಬೋಯಿಂಗ್ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ಎರಡು ಪ್ರಶಸ್ತಿ

Upayuktha
0

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಏರೋ ಕ್ಲಬ್ ತಂಡವು ಇತ್ತೀಚೆಗೆ ಬೆಂಗಳೂರಿನ ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ನಡೆದ ಬೋಯಿಂಗ್ ೨೦೨೩ ಏರೋ ಮಾಡಲಿಂಗ್ ಸ್ಪರ್ಧೆಯ ೮ನೇ ಆವೃತ್ತಿಯಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಗಳಿಸಿದೆ. ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ದೇಶದ ವಿವಿಧ ಕಾಲೇಜುಗಳ 12 ತಂಡಗಳಲ್ಲಿ 5 ತಂಡಗಳು ನಿಟ್ಟೆ ತಾಂತ್ರಿಕ ಕಾಲೇಜಿನದ್ದಾಗಿತ್ತು ಎಂಬುದು ಕಾಲೇಜಿಗೆ ಅತ್ಯಂತ ಹೆಮ್ಮೆಯ ವಿಚಾರ.


ಎರಡನೇ ಪ್ರಶಸ್ತಿ ಪಡೆದ ತಂಡದಲ್ಲಿ ಪೈಲೆಟ್ ಆಗಿ ಅಮನ್ ಕುಮಾರ್ ಶ್ರೀವಾಸ್ತವ್, ಗಗನ್ ಜಿ ನಾಯಕ್ ಕೋ ಪೈಲೆಟ್, ಶರಣ್ಯ ಆಚಾರ್ ಕ್ಯಾಪ್ಟನ್ ಹಾಗೂ ನಿಶ್ಮಿತಾ ಸದಸ್ಯೆಯಾಗಿದ್ದರು.

ಮೂರನೇ ಪ್ರಶಸ್ತಿ ಪಡೆದ ತಂಡದಲ್ಲಿ ಪೈಲೆಟ್ ಆಗಿ ರತನ್ ರಾಜ್, ದಿವ್ಯಾಮ್ಶು ವೈಎನ್ ಕೋ ಪೈಲೆಟ್ ಹಾಗೂ ಕ್ಯಾಪ್ಟನ್ ಆಗಿ, ನ್ಯಾನ್ಸಿ ಪರ್ಮಾರ್ ಹಾಗೂ ಅನಂತಕೃಷ್ಣ ಸದಸ್ಯರಾಗಿದ್ದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಸಾಧನೆಯನ್ನು ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿವರ್ಗದವರು ಅಭಿನಂದಿಸಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top