ಗೆಲುವಿನ ಮಂತ್ರ ಒಂದೇ- ಬಿ ಪಾಸಿಟಿವ್…

Upayuktha
1 minute read
0


ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಹಲವಾರು ಬಾರಿ ಅದೆಷ್ಟೋ ನೆಗೆಟಿವ್ ಆಲೋಚನೆಗಳನ್ನು ಮಾಡುತ್ತಲೇ ಇರುತ್ತಾನೆ. ವಿದ್ಯಾರ್ಥಿಯಾದವನು ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದಾಗ, ಯುವಕ/ಯುವತಿಯರು ಓದು ಮುಗಿಸಿ ಹಲವಾರು ಡಿಗ್ರಿ ಕೈಯಲ್ಲಿ ಹಿಡಿದುಕೊಂಡು ಕೆಲಸಕ್ಕಾಗಿ ಅಲೆದಾಡುವಾಗ, ವೃದ್ಧರು ತಮ್ಮ ಮಕ್ಕಳಿಗೆ ನಾವು ಇಷ್ಟೆಲ್ಲಾ ಮಾಡಿದ್ವಿ ಆದರೆ ಅವರು ಈಗ ನಮ್ಮೊಂದಿಗಿಲ್ಲವಲ್ಲ ಎಂದು, ಇನ್ನು ಕೆಲವರು ನಾನು ಈ ಮನೆಗೆ  ಹಿರಿಯವ ನನಗೇ ಗೌರವ ಇಲ್ಲವಲ್ಲ ಎಂದು… ಒಟ್ಟಿನಲ್ಲಿ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ತಮ್ಮ ತಲೆಯನ್ನು 'ಬಿ ನೆಗೆಟಿವ್' ಎಂದು ಮಂತ್ರಿಸಿಬಿಟ್ಟಿರುತ್ತಾರೆ. 


ನಮ್ಮ ತಲೆಗೆ ಈ ನೆಗೆಟಿವ್ ಯೋಚನೆ ನೀಡುವ ಮೊದಲು ಸ್ವಲ್ಪ ಪಾಸಿಟಿವ್ ಆಗಿ ಯೋಚಿಸೋಣ. ಮನುಷ್ಯನಿಗೆ ಈ ಜನ್ಮ  ದೇವರ ಉಡುಗೊರೆ. ಅದಕ್ಕಾಗಿಯೇ ಈ ಕ್ಷಣದ ಬದುಕನ್ನ ಇಂಗ್ಲೀಷಿನಲ್ಲಿ "ಪ್ರೆಸೆಂಟ್" ಅಂತ ಕರೀತಾರೆ. ಪ್ರತಿಬಾರಿ ನೆಗೆಟಿವ್ ಆಗಿ ಯೋಚನೆ ಮಾಡುವಾಗ ದೇವರ ಪ್ರೆಸೆಂಟ್ ಓಪನ್ ಮಾಡಿ ನೋಡುವುದನ್ನ ಮರೆತು ಪಾಸ್ಟ್ ಆಗಿ ಕಳೆದು ಹೋದ ಭೂತದ ಬಗ್ಗೆ ಕೊರಗುತ್ತೇವೆ ಅಲ್ಲವೇ? ಅರ್ಥವಿಲ್ಲದ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಎರಡೂ ವ್ಯರ್ಥ. 


ಅಂಕಗಳು ಕಡಿಮೆ ಬಂದರೆ ನಾನೆಲ್ಲಿ ಎಡವಿದೆ ಎಂದು ಒಮ್ಮೆ ಯೋಚಿಸಿದರಾಯಿತು. ಮುಂದೆ ಹಲವಾರು ಪರೀಕ್ಷೆಗಳಿವೆ ಎಂಬ ವರ್ತಮಾನದ ಸತ್ಯ ಕಣ್ಣ ಮುಂದೆ ಬರುತ್ತದೆ. “ಅದರಲ್ಲಿ ಒಳ್ಳೆಯ ಅಂಕ ಗಳಿಸಿದರಾಯಿತು" ಎಂಬ ಯೋಚನೆ ಆ ಕ್ಷಣದ ಬೇಸರವನ್ನು ಮರೆಯಾಗಿಸುತ್ತದೆ. ಅತ್ಯಂತ ವ್ಯರ್ಥವಾಗಿ ನೆಗೆಟಿವ್ ಲೋಕದಲ್ಲಿ ಬದುಕುವವರು ಇಂದಿನ ಯುವ ಸಮಾಜ. ತಮ್ಮ ಮಟ್ಟಕ್ಕೆ ಸರಿಯಾದ ಉದ್ಯೋಗ ಸಿಗಲಿಲ್ಲವಲ್ಲ ಎಂದು ಯೋಚಿಸುವ ನಾವು. ನಾನೇ ಉದ್ಯೋಗ ನೀಡುತ್ತೇನೆ ಎಂಬ ಸಾಧನೆಯ ಮಾತುಗಳನ್ನಾಡುವುದಿಲ್ಲ. ಸಿಕ್ಕ ಉದ್ಯೋಗದಲ್ಲಿ ಜೀವನವನ್ನು ಸುಂದರವಾಗಿ ನಡೆಸುವ ಬಗ್ಗೆ ಯೋಚಿಸುವ ತಾಳ್ಮೆ ಬಂದಾಗ ಜೀವನದಲ್ಲಿ ಸಿಗುವ ಸಣ್ಣ ಖುಷಿಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಹದಿಹರೆಯದಲ್ಲಿ ಬರುವ ಸಮಸ್ಯೆಗಳು ನಮಗೆ ಮಾತ್ರ ಬರುತ್ತಿವೆ ಎಂದುಕೊಂಡು ಕೊರಗುವ ಬದಲು, ಪ್ರಕೃತಿಯ ಮಡಿಲಿನಲ್ಲಿ ಕುಳಿತು ಆಲೋಚಿಸೋಣ. ಹಲವಾರು ಮಾರ್ಗಗಳು ತನ್ನಿಂದ ತಾನೇ ಗೋಚರಿಸುತ್ತವೆ. 


ಇನ್ನೂ ಕೆಲವು ವಿಚಿತ್ರಗಳಿರುತ್ತವೆ. ಭವಿಷ್ಯದ ಬಗ್ಗೆ ನೆಗೆಟಿವ್ ಯೋಚನೆ. "ನಾನು ಇವತ್ತು ಗಾಡಿಯಲ್ಲಿ ಹೋಗುತ್ತಿದ್ದೆ ಎದುರಿನಲ್ಲಿ ಒಂದು ಕಾರ್ ಅಡ್ಡ ಬಂತು ಸಧ್ಯ ಬದುಕಿದೆ ನಾಳೆಯೂ ಅಡ್ಡ ಬಂದು ನನಗೆ ಆಕ್ಸಿಡೆಂಟ್ ಆಗಿ ನಾನು ಸತ್ತರೆ…" ಇಂತಹ ಯೋಚನೆ!. ಇಂತಹವರನ್ನು ಬದಲಾಯಿಸುವುದು ಬಹುಶಃ ಅಸಾಧ್ಯ. ಆದರೂ ಅವರಲ್ಲಿ "ಇಲ್ಲಪ್ಪ ನಿನ್ನೆ ಬಂದ ಕಾರ್ ಇವತ್ತು ಪಂಚರ್ ಆಗಿದೆ. ಹಾಗಾಗಿ ಇವತ್ತು ಬರುದಿಲ್ಲ" ಎನ್ನುವ ನೆಗೆಟಿವ್ ಸ್ವರೂಪದ ಪಾಸಿಟಿವ್ ಅಂಶವನ್ನು ತುಂಬಬಹುದೇನೋ…!


ಪಾಸಿಟಿವ್ ಆಲೋಚನೆ ನಿಜವಾಗಿಯೂ ಒಂದು ದೊಡ್ಡ ಸವಾಲು. ವರ್ತಮಾನದ ಸತ್ಯವನ್ನು ಒಪ್ಪಿ ನಡೆಯದೆ ಇದ್ದಾಗ ಅದು ಅಸಾಧ್ಯವೂ ಹೌದು. ಆದರೆ ಅದನ್ನು ಜೀವನದಲ್ಲಿ  ಅಳವಡಿಸಿಕೊಳ್ಳುವುದರಲ್ಲಿ ಸಫಲನಾದರೆ ನಮ್ಮಷ್ಟು ಸಂತಸದ ಮನುಷ್ಯ ಬೇರೆ ಯಾರೂ ಇರುವುದಿಲ್ಲ. ಹಾಗಾಗಿ  “ಬಿ ಪಾಸಿಟಿವ್”...


-ಲತೇಶ್ ಸಾಂತ 

ಅಂತಿಮ ಬಿ.ಎ, ಪತ್ರಿಕೋದ್ಯಮ ವಿಭಾಗ

ವಿ.ವಿ. ಕಾಲೇಜು ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top