ಮಂಗಳೂರು: ವೈವಿಧ್ಯಮಯ ಹಣಕಾಸು ಸೇವೆಗಳ ಕಂಪನಿಯಾಗಿರುವ ಅಬಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ನಾಲ್ಕನೇ ತ್ರೈಮಾಸಿಕ ಮತ್ತು 2023 ನೇ ಹಣಕಾಸು ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಕಂಪನಿಯು ಅನೇಕ ಫೈನಾನ್ಷಿಯಲ್ ಮ್ಯಾಟ್ರಿಕ್ಸ್ ನಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಉದ್ಯಮದಲ್ಲಿ ಪ್ರಮುಖ ಕಂಪನಿ ಸ್ಥಾನದಲ್ಲಿರುವುದನ್ನು ಪುನಃ ಖಚಿತಪಡಿಸಿದೆ.
2023 ನೇ ಹಣಕಾಸು ಸಾಲಿನಲ್ಲಿ ಕಂಪನಿಯು ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.14 ರ ದರದಲ್ಲಿ ಒಟ್ಟು 70.3 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಇದರ ಪ್ರಮಾಣ ಕಳೆದ ವರ್ಷ ಅಂದರೆ 2022 ರಲ್ಲಿ 61.8 ಕೋಟಿ ರೂಪಾಯಿ ಇತ್ತು. ಇನ್ನು 2023 ನೇ ಸಾಲಿನಲ್ಲಿ ಕಾರ್ಯಾಚರಣೆ ಲಾಭವು ಶೇ.15 ರಷ್ಟು ಹೆಚ್ಚಳವಾಗಿದ್ದು, ಕಾರ್ಯಾಚರಣೆಯಿಂದ 76 ಕೋಟಿ ರೂಪಾಯಿಗಳ ಲಾಭ ಗಳಿಸಿದೆ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಬನ್ಸಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಒಟ್ಟಾರೆ 2023 ರಲ್ಲಿ 1,150.97 ಕೋಟಿ ಕಾರ್ಯಾಚರಣೆ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.80.2 ರಷ್ಟು ಹೆಚ್ಚಳವಾಗಿದೆ. 2022 ರಲ್ಲಿ 638.62 ಕೋಟಿ ರೂಪಾಯಿಗಳ ಆದಾಯವಿತ್ತು. ಏಜೆನ್ಸಿ ಆದಾಯದಲ್ಲಿ ಶೇ.83 ರಷ್ಟು ಹೆಚ್ಚಳವಾಗಿದ್ದು, ಮಾರ್ಚ್ 23 ರಲ್ಲಿ 43 ಕೋಟಿ ರೂಪಾಯಿ ಗಳಿಸಿದೆ. 2023 ನೇ ಸಾಲಿನಲ್ಲಿ ಇಪಿಎಸ್ ಪ್ರತಿ ಷೇರಿಗೆ 14.81 ರೂಪಾಯಿಗಳಿತ್ತು. ನಿವ್ವಳ ಎನ್ ಪಿಎಸ್ ಅನ್ನು ಶೂನ್ಯದಲ್ಲೇ ಮುಂದುವರಿಸುವ ಮೂಲಕ ಕಂಪನಿಯು ರಿಸ್ಕ್ ಮ್ಯಾನೇಜ್ಮೆಂಟ್ ಅನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ