ಉಡುಪಿ: ಏಪ್ರಿಲ್ 25 ರಂದು ಶೂನ್ಯ ನೆರಳಿನ ದಿನ - ಈ ಖಗೋಳ ವಿದ್ಯಮಾನವನ್ನು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಿಸಿದರು. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಈ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಿದ್ಯಾರ್ಥಿಗಳು ಮಧ್ಯಾಹ್ನ 12.29 ಕ್ಕೆ ವಿವಿಧ ವಸ್ತುಗಳ ನೆರಳುಗಳು ಕಣ್ಮರೆಯಾಗಿರುವುದನ್ನು ಗಮನಿಸಿದರು. PAAC ನ ವಿದ್ಯಾರ್ಥಿಗಳು ಹಲವಾರು ವಸ್ತುಗಳನ್ನು ತಂದು ಈ ವಿದ್ಯಮಾನವನ್ನು ನೋಡಿ ಆನಂದಿಸಿದರು. ಶೂನ್ಯ ನೆರಳಿನ ಕ್ಷಣದಲ್ಲಿ ಮಾತ್ರ ಪ್ರದರ್ಶಿಸಬಹುದಾದ ಕೆಲವು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಡಾ. ಎ . ಪಿ . ಭಟ್, PAACನ ಸ್ಥಾಪಕ ಸಂಯೋಜಕರು ಹಾಗೂ ಉಡುಪಿಯ ಪೂರ್ಣಪ್ರಜ್ಞ ಸಂಸ್ಥೆಗಳ ಆಡಳಿತಾಧಿಕಾರಿ, ಇವರು ವಿದ್ಯಾರ್ಥಿಗಳಿಗೆ ಈ ವಿದ್ಯಮಾನದ ಹಿಂದಿನ ಖಗೋಳ ವಿಜ್ಞಾನವನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ವಿನಯ್ ಕುಮಾರ್, ಕಾಲೇಜಿನ ವಿವಿಧ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಅತುಲ್ ಭಟ್, ಸಂಯೋಜಕರು
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ