ಮಂಗಳೂರು ವಿವಿ ಕಾಲೇಜು: ಪಕ್ಷಿಗಳಿಗೆ ನೀರು ಇಡುವ ಕಾರ್ಯಕ್ರಮ

Upayuktha
0

ಮಂಗಳೂರು: ಜಾಗತಿಕ ತಾಪಮಾನ ಏರಿಕೆಯಿಂದ ಜನಜೀವನ ಹಾಗೂ ಪ್ರಾಣಿಪಕ್ಷಿಗಳ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ಅರಿತುಕೊಂಡು,ಜೀವಿಗಳ ಉಳಿವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಾವು ಸಹಕರಿಸಬೇಕಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯಪಟ್ಟರು.


ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ , ಯುವ ರೆಡ್ ಕ್ರಾಸ್ ವತಿಯಿಂದ ಶುಕ್ರವಾರ ನಡೆದ " ಪಕ್ಷಿಗಳಿಗೆ ನೀರು ಇಡುವ ಕಾರ್ಯಕ್ರಮ" ವನ್ನು ಉದ್ಘಾಟಿಸಿ ಮಾತನಾಡಿದರು. "ಬಿಸಿಯಾದ ವಾತಾವರಣದಿಂದ ಜೀವಿಗಳು ಕಂಗೆಟ್ಟಿದ್ದು ಪಕ್ಷಿಗಳಿಗೆ ನೀರು ಸಿಗದೆ ಪ್ರಾಣ ಬಿಡುತ್ತಿವೆ. ಅವುಗಳ ಉಳಿವಿಗಾಗಿ ನಾವು ಪ್ರಾಣಿ ಪಕ್ಷಿಗಳಿಗೆ ನೀರು ಇಟ್ಟು ರಕ್ಷಿಸಬೇಕು", ಎಂದರು.


ಯುವ ರೆಡ್ ಕ್ರಾಸ್ ನ ಕಾರ್ಯಕ್ರಮಾಧಿಕಾರಿ ಡಾ.ಭಾರತಿ ಪಿಲಾರ್ ಅವರು, ಬಿಸಿಲಿನ ಏರಿಕೆ ಪಕ್ಷಿಗಳ ಬದುಕಿಗೆ ಮಾರಕವಾಗಿರುವ ಹಿನ್ನಲೆಯಲ್ಲಿ ಪಕ್ಷಿಗಳಿಗೆ ಒಂದು ಅಳಿಲು ಸೇವೆಯನ್ನು ಯೂತ್ ರೆಡ್ ಕ್ರಾಸ್ ವತಿಯಿಂದ ಮಾಡುತ್ತಿದ್ದೇವೆ, ಎಂದು ಪ್ರಾಸ್ತಾವಿಕವಾಗಿ ನುಡಿದರು.


ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ ಅವರು ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಯವರು ಪರಿಸರದ ಬಗ್ಗೆ ಆಯೋಜಿಸಿದ ಕಾರ್ಯಕ್ರಮವು ನಮಗೆ ಪ್ರೇರಣೆಯಾಗಿದೆ. ಹಾಗಾಗಿ ನಾವು ಈ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು. ಈ ಸಂದರ್ಭ ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಶ್ರೀಮತಿ ಅರುಣ ಕುಮಾರಿ, ಗಣಕ ವಿಜ್ಞಾನ ವಿಭಾಗದ ಡಾ.ವೀರಭದ್ರಪ್ಪ, ಗ್ರಂಥಪಾಲಕಿ ಡಾ. ವನಜಾ, ಐ.ಕ್ಯೂ.ಎ.ಸಿ. ಯ ಸಂಯೋಜಕ ಡಾ.ಸಿದ್ಧರಾಜು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ  ಕುಮಾರಿ ಕ್ಷಮ್ಯಾ ಧನ್ಯವಾದ ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top