ಮಂಗಳೂರು: ವನಶ್ರೀ ಸಸ್ಯಶಾಸ್ತ್ರ ಸಂಘದಿಂದ ಎನ್‌ಇಪಿ ಪಠ್ಯಕ್ರಮದ ಕುರಿತು ಕಾರ್ಯಾಗಾರ

Upayuktha
0

ಮಂಗಳೂರು: ವನಶ್ರೀ ಸಸ್ಯಶಾಸ್ತ್ರ ಸಂಘ ಹಾಗೂ ಡಾ. ಬಿ ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಇಂದು ಒಂದು ದಿನದ NEP ಪಠ್ಯಕ್ರಮದ ಕಾರ್ಯಾಗಾರವನ್ನು ಆಯೋಜಿಸಲಾಯಿತು.


ಕಾರ್ಯಾಗಾರವನ್ನು ಡಾ. ಜಯಕರ್ ಭಂಡಾರಿ ಅವರು ಉದ್ಘಾಟಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಎನ್ಇಪಿ  ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಆಯಾಮಗಳು ಮಾತು ವಿದ್ಯಾರ್ಥಿಗಳ ಅಗತ್ಯತೆ ಕುರಿತು ತಿಳಿಸಿದರು.


ವನಶ್ರೀ ಅಧ್ಯಕ್ಷರಾದ ಡಾ. ಕುಮಾರ್ ಹೆಗ್ಡೆ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಸ್ಯ ಶಾಸ್ತ್ರದಲ್ಲಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾತನಾಡಿದರು. ಮುಂದಿನ ದಿನಗಳಲ್ಲಿ ಸಸ್ಯಶಾಸ್ತ್ರದಲ್ಲಿನ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಬಗ್ಗೆ ವಿವರಣೆ ನೀಡಿದರು.


ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಗಂಗಾಧರ್ ಭಟ್ ಅವರು ದೂರಸಂವೇದಿ ಹಾಗೂ ಸಸ್ಯ ವರ್ಗದ ವಿಶ್ಲೇಷಣೆ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಡಾ. ಸಿದ್ದರಾಜು ಅವರು ನಿರೂಪಿಸಿದರು. ವನಶ್ರೀಯ ಕಾರ್ಯದರ್ಶಿ ಡಾ.ವಿನಾಯಕ ಕೆ ಎಸ್ ಇವರು ಸ್ವಾಗತಿಸಿ, ಕುಲದೀಪ್ ಇವರು ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top