ಉಜಿರೆ ಕಾಲೇಜಿನ ಸಸ್ಯೋದ್ಯಾನದಲ್ಲಿ ಗಿಡಮೂಲಿಕೆಗಳ ಕುರಿತ ಕಾರ್ಯಾಗಾರ

Upayuktha
0

ಉಜಿರೆ: ಎಸ್.ಡಿ.ಎಂ. ಸೆಕೆಂಡರಿ ಶಾಲೆ ಆಯೋಜಿಸಿರುವ ಬೇಸಿಗೆ ಶಿಬಿರದ ಅಂಗವಾಗಿ  ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ  ಆರ್ಬೋರೆಟಮ್ ಗೆ ಶಿಕ್ಷಕರ ಜೊತೆಗೆ, 100 ವಿದ್ಯಾರ್ಥಿಗಳು ತಂಡವು ಭೇಟಿ ನೀಡಿ ವೀಕ್ಷಣೆ, ಮಾಹಿತಿ ಸಂಗ್ರಹ ಹಾಗೂ ಸಂವಾದ ಕಾರ್ಯಾಗಾರದಲ್ಲಿ ಭಾಗವವಹಿಸಿತು . 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ  ವಿವಿಧ ಜಾತಿಯ ಗಿಡಮೂಲಿಕೆಗಳ ಪರಿಚಯ, ಸಸ್ಯ ವರ್ಗೀಕರಣ, ಜೀವ ವೈವಿಧ್ಯತೆ, ಪರಿಸರ ಸಂರಕ್ಷಣೆ, ನಾಳಿನ ದಿನಗಳಿಗೆ ಸಸ್ಯಗಳ ಅಗತ್ಯತೆ ಮುಂತಾದ ಅತ್ಯಮೂಲ್ಯ ವಿಷಯಗಳ ಬಗ್ಗೆ ಎಸ್.ಡಿ.ಎಮ್. (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ಡಾ| ಕುಮಾರ ಹೆಗ್ಡೆ ಬಿ.ಎ. ಇವರು ಕೂಲಂಕುಷ  ಮಾಹಿತಿ ನೀಡಿದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಕೆ. ಎಸ್. ಇವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top