ಏ. 8ರಂದು ತುಳು ಮಹಾಕೂಟ: ಸಂಘಟಕರ ಸಮ್ಮಿಲನ- ಮೂಡುಬಿದಿರೆಯಲ್ಲಿ

Upayuktha
0

ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟದ ಆಶ್ರಯದಲ್ಲಿ ತುಳುಕೂಟ ಬೆದ್ರ ಸಹಯೋಗದಲ್ಲಿ ಏ.8ರಂದು ಶನಿವಾರ ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ತುಳು ಮಹಾಕೂಟ- ಸಮಾವೇಶ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಎಂ. ಮೋಹನ ಆಳ್ವ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.


ಈ ಸಂದರ್ಭದಲ್ಲಿ ಹಲವು ಗಣ್ಯ ತುಳುವರನ್ನು ಸಮ್ಮಾನಿಸಿ ಗೌರವಿಸಲಾಗುತ್ತಿದೆ. ವಿದೇಶದಲ್ಲಿ ತುಳು ಸಂಘಟನೆಗಾಗಿ ಉದ್ಯಮಿ, ಸಂಘಟಕ ಸರ್ವೋತ್ತಮ ಶೆಟ್ಟಿ ಅಬುದಾಬಿ, ಮುಂಬಯಿನ ಸಂಘಟಕ ಶ್ರೀನಿವಾಸ ಮಂಕುಡೆ ಮೀರಜ್, ಡಾ. ಭಾಸ್ಕರಾನಂದ ಕುಮಾರ್ ಕಟೀಲು, ಲಯನ್ ದಿವಾಕರ ಶೆಟ್ಟಿ ಸಾಂಗ್ಲಿ, ಎಂ ರತ್ನಕುಮಾರ್ ಮಂಗಳೂರು, ಧರ್ಮಪಾಲ್ ಯು. ದೇವಾಡಿಗ ಮುಂಬಯಿ, ಬಿ.ಎಂ ಹರೀಶ್ ಬೋಳೂರು- ಇವರನ್ನು ಸನ್ಮಾನಿಸಲಾಗುವುದು.


ಅಖಿಲ ಭಾರತ ತುಳು ಒಕ್ಕೂಟ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷ ಶಶಿಧರ್ ಬಿ. ಶೆಟ್ಟಿ ಬರೋಡಾ, ಅಧ್ಯಕ್ಷರಾದ ಎ.ಸಿ. ಭಂಡಾರಿ, ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಎಂ. ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಉಪಾಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ. ದಾಮೋದರ ನಿಸರ್ಗ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಾರಾನಾಥ ಶೆಟ್ಟಿ ಬೋಳಾರ, ಜತೆ ಕಾರ್ಯದರ್ಶಿ ಪಿ.ಎ ಪೂಜಾರಿ, ಹರೀಶ್ ನೀರ್‍‌ಮಾರ್ಗ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಡಾ. ರಾಜೇಶ್ ಅಳ್ವ ಬದಿಯಡ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
Post a Comment (0)
Advt Slider:
To Top