ಶ್ರೀನಿವಾಸ್ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ರ್‍ಯಾಂಕ್‌ ವಿಜೇತರು

Upayuktha
0

 

ಮಂಗಳೂರು: ನಗರದ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಇದರ 2021-22ನೇ ಶೈಕ್ಷಣಿಕ ಸಾಲಿನ ಏವಿಯೇಷನ್ ಪದವಿ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಮತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ವಿವರವನ್ನು ಪ್ರಕಟಿಸಿದೆ. ಬಿ.ಬಿ.ಎ. ಏವಿಯೇಶನ್ ಮ್ಯಾನೇಜ್‍ಮೆಂಟ್ ವಿಭಾಗದ ಮೊಹಮ್ಮದ್ ಫಾರಿಸ್ ಪ್ರಥಮ ರ್‍ಯಾಂಕ್‌ ಮತ್ತು ಚಿನ್ನದ ಪದಕ, ಐಶ್ವರ್ಯ ಪುಂಡಲಿಕ್ ಮಗ್ದಮ್ 2ನೇ ರ್‍ಯಾಂಕ್‌, ಮೊಹಮ್ಮದ್ ಸಿರಾಜುದ್ದೀನ್ ಮುನೈಝ್ 3ನೇ ರ್‍ಯಾಂಕ್‌, ಎಲ್ಸಿಟಾ ಮಥಾಯಸ್ 4ನೇ ರ್‍ಯಾಂಕ್‌, ಅಭಿಲಾಶ್ ಶೆಟ್ಟಿ, ಸುಮುಖ್ ಕೆ.ಎಂ., ಪ್ರತೀಕ್ಷಾ ಎಸ್ ಶೆಟ್ಟಿ, ವಿಲೋನಾ ಮೆಂಡೋನ್ಸಾ ಹಾಗೂ ಕಾರ್ತಿಕ್ ಸುರೇಶ್ ಕಾಂಚನ್ ಕ್ರಮವಾಗಿ 5ನೇ, 6ನೇ 7ನೇ 8ನೇ ಹಾಗೂ 9ನೇ ರ್‍ಯಾಂಕ್‌ ಪಡೆದುಕೊಂಡಿರುತ್ತಾರೆ. 


ಅದೇ ರೀತಿ ಎಂ.ಬಿ.ಎ. ಏವಿಯೇಶನ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಶರ್ಮಿನ್ ನಾಝ್ ಪ್ರಥಮ ರ್‍ಯಾಂಕ್‌ ಪಡೆದುಕೊಂಡಿರುತ್ತಾರೆ. ರ್‍ಯಾಂಕ್‌ ಪಡೆದ ಎಲ್ಲಾ 10 ವಿಧ್ಯಾರ್ಥಿಗಳನ್ನು ವಿವಿ ಕುಲಾಧಿಪತಿಗಳಾದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಹಾಗೂ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top