ಮುಕ್ತ ವಿ.ವಿ ಪರೀಕ್ಷಾ ಶುಲ್ಕ ಪಾವತಿಗೆ ಮೇ 3 ಕೊನೆಯ ದಿನ

Upayuktha
0

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸ್‌ಗಳಿಗೆ 2018-19 ಶೈಕ್ಷಣಿಕ ಸಾಲಿನಿಂದ 2020-21 ನೇ ಶೈಕ್ಷಣಿಕ ಸಾಲಿನವರೆಗೆ (ಜುಲೈ/ಜನವರಿ) ಆವೃತ್ತಿಯಲ್ಲಿ ಹಾಗೂ 2022-23 ನೇ ಸಾಲಿನ ಜುಲೈ ಆವೃತ್ತಿಯಲ್ಲಿ (ಸಿ.ಬಿ.ಎಸ್.ಇ/ನಾನ್ ಸಿ.ಬಿ.ಎಸ್.ಇ) ಪ್ರವೇಶಾತಿ ಪಡೆದಿರುವ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಾದ ಬಿ.ಬಿ.ಎ, ಬಿ.ಸಿ.ಎ, ಎಲ್ಲಾ ಬಿ.ಎಸ್ಸಿ, ಎಂ.ಎ, ಎಂ.ಕಾಂ, ಎಂ.ಲಿಬ್.ಐ.ಐಸ್ಸಿ, ಎಂ.ಬಿ.ಎ ಮತ್ತು ಎಲ್ಲಾ ಎಂ.ಎಸ್ಸಿ (ಸೆಮಿಸ್ಟರ್ ಪದವಿಗಳು) ಕೋರ್ಸುಗಳ ಪರೀಕ್ಷಾ ಶುಲ್ಕ ಪಾವತಿಗೆ ದಂಡ ಶುಲ್ಕವಿಲ್ಲದೆ ಏಪ್ರಿಲ್ 24 ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಮೇ 3 ಕೊನೆಯ ದಿನವಾಗಿದೆ.


ಪರೀಕ್ಷೆಗಳನ್ನು ಮೇ 18 ರಿಂದ ಪ್ರಾರಂಭಿಸಲಾಗುವುದು. ಪರೀಕ್ಷಾ ಶುಲ್ಕ ಪಾವತಿಗೆ ಹಾಗೂ ಪರೀಕ್ಷೆಗಳ ದಿನಾಂಕದ ವೇಳಾಪಟ್ಟಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.ksoumysuru.ac.in ನಲ್ಲಿ ಲಭ್ಯವಿದೆ ಎಂದು ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top