ಶಂಕರಪುರ ಎಂದರೆ ಮೊದಲು ನೆನಪಾಗುವುದೇ ಮಲ್ಲಿಗೆ. ಮಲ್ಲಿಗೆಯ ಕಂಪು ಇಂಪುಗೊಳಿಸುತ್ತದೆ. ಮಲ್ಲಿಗೆ ವಿವಿಧ ಪ್ರಕಾರಗಳನ್ನು ಹೊಂದಿದ್ದು, ಇಲ್ಲಿಯ ಮಲ್ಲಿಗೆ ಉತ್ತಮ ಬೇಡಿಕೆ ಹೊಂದಿದೆ. ಉಡುಪಿ ಜಿಲ್ಲೆಯ ಮೂಡಬೆಟ್ಟು ಗ್ರಾಮದಲ್ಲಿ ಹೂವಿನ ಬೆಳೆಯನ್ನು ನೋಡಬಹುದು. ಶಂಕರಪುರದ ಮಲ್ಲಿಗೆ ಹೂವನ್ನು ಕಟ್ಟುವ ಶೈಲಿ ಮತ್ತು ಅದರ ವಿಶೇಷ ಘಮ ಇದಕ್ಕೆ ಅಪಾರ ಬೇಡಿಕೆ ತಂದುಕೊಟ್ಟಿದೆ. ಸಾಮಾನ್ಯವಾಗಿ ಶಂಕರಪುರದ ಆಸು- ಪಾಸುವಿನ ಜನರು ಈ ಮಲ್ಲಿಗೆಯನ್ನು ಬೆಳೆಸುತ್ತಾರೆ. ಈ ಮಲ್ಲಿಗೆ ಉಡುಪಿ ಮತ್ತು ದಕ್ಷಿಣಕನ್ನಡದಲ್ಲಿ ಅಪಾರವಾದ ಬೇಡಿಕೆಯನ್ನು ಹೊಂದಿದ್ದು ಇಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಮಲ್ಲಿಗೆ ಕೃಷಿಯನ್ನು ಮಾಡುತ್ತಾರೆ. ಇದು ಅಲ್ಲಿನ ಜನರಿಗೆ ಅಧಿಕ ಲಾಭವನ್ನು ತಂದುಕೊಟ್ಟಿದೆ.
ಶಂಕರಪುರ ಮಲ್ಲಿಗೆಯನ್ನು ಕೆಂಪು ಮತ್ತು ಸುಡುಮಣ್ಣುವಿನಲ್ಲಿ ನಡೆಯಲಾಗುತ್ತದೆ. ಸಸಿ ನೆಟ್ಟ ಮೂರು ತಿಂಗಳಿನಲ್ಲಿ ಗಿಡವು ಉತ್ತಮವಾಗಿ ಬೆಳೆದು ಅದರಲ್ಲಿ ಮೊಗ್ಗುಗಳು ಮೂಡುತ್ತದೆ. ಸಸ್ಯವನ್ನು ನೆಡುವಾಗ ಬೇಕಾಗುವ ನೀರು ಮತ್ತು ಗೊಬ್ಬರವನ್ನು ಪೂರೈಸಬೇಕಾಗುತ್ತದೆ. 15 ದಿನಗಳಿಗೊಮ್ಮೆ ಸುಣ್ಣ ಹಾಗೂ ಕಡಲೆಹಿಂಡಿಯ ಗೊಬ್ಬರವನ್ನು ನೀಡುವುದರಿಂದ ವೇಗವಾಗಿ ಬೆಳೆದು ಫಸಲು ಉತ್ತಮವಾಗಿ ದೊರೆಯುತ್ತದೆ. ಕೀಟಬಾಧೆಯ ಸಮಸ್ಯೆ ಇರುವುದರಿಂದ ಕೀಟನಾಶಕಗಳನ್ನು ಆಗಾಗ ಸಿಂಪಡಿಸುತ್ತಿರಬೇಕು. ಅದರ ಬುಡದಲ್ಲಿ ಬೆಳೆಯುವ ಕಳೆಗಳನ್ನು ತೆಗೆಯುತ್ತಿರಬೇಕು.
ಶಂಕರಪುರ ಮಲ್ಲಿಗೆಯನ್ನು ಅಲ್ಲಿನ ಸ್ಥಳೀಯ ವ್ಯಾಪಾರಸ್ಥರು ಮಾರಾಟ ಮಾಡುತ್ತಾರೆ. ಅವರು ರೈತನಿಂದ ಮಲ್ಲಿಗೆಯನ್ನು ಖರೀದಿಸಿ, ಅದಕ್ಕೆ ತಕ್ಕಂತೆ ದಿನಕ್ಕೆ ಬೀಳುವ ಮೊತ್ತವನ್ನು ಒಂದುಗೂಡಿಸಿ ವಾರದ ಅಂತ್ಯದಲ್ಲಿ ರೈತರಿಗೆ ನೀಡುತ್ತಾರೆ. ಶಂಕರಪುರದ ಮಲ್ಲಿಗೆಯ ದರವು ನಿರ್ದಿಷ್ಟವಾಗಿಲ್ಲ, ಅದರ ಪೂರೈಕೆ ಮತ್ತು ಬೇಡಿಕೆಯ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಮಲ್ಲಿಗೆಯು ಅಟ್ಟೆ ರೂಪದಲ್ಲಿ ಸಿಗುತ್ತದೆ. ಅಟ್ಟೆಯು ನಾಲ್ಕು ಚೆಂಡುಗಳನ್ನು ಹೊಂದಿದ್ದು, ಒಂದು ಚೆಂಡಿನಲ್ಲಿ 800 ಮಲ್ಲಿಗೆ ಮೊಗ್ಗುಗಳು ಇರುತ್ತದೆ. ಮಲ್ಲಿಗೆ ಪ್ರತಿ ಶನಿವಾರ ವಿದೇಶಗಳಿಗೆ ರಫ್ತು ಆಗುತ್ತದೆ. ಮಲ್ಲಿಗೆ ಗಿಡವನ್ನು ಮಗುವಿನ ತರ ನೋಡಿಕೊಂಡರೆ ಅದು ಅಧಿಕ ಲಾಭವನ್ನು, ಆದಾಯವನ್ನು ತರಬಲ್ಲ ಬೆಳೆಯಾಗಿದೆ. ಮದುವೆ, ಸೀಮಂತ ಮುಂತಾದ ಹಲವಾರು ಶುಭ ಕಾರ್ಯಕ್ರಮಗಳಲ್ಲಿ ಅಲ್ಲದೆ ದೇವಸ್ಥಾನಗಳಲ್ಲಿ ಮತ್ತು ದೈವಸ್ಥಾನಗಳಲ್ಲಿ ಮಲ್ಲಿಗೆಯನ್ನು ವಿಶೇಷವಾಗಿ ಬಳಸುತ್ತಾರೆ.
-ದೇವಿಶ್ರೀ ಶಂಕರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ