ಎಸ್‌ಡಿಎಂ: 'ಛಾಯಾಗ್ರಹಣ' ಕಾರ್ಯಾಗಾರ

Upayuktha
0

ಚಿತ್ರಗಳು: ಅಭಿಲಾಷ್ ಕೆ.ಎಸ್.


ಉಜಿರೆ: ಎಸ್‌ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಶನಿವಾರ (ಏ.29) "Basics of Nature Photography" ಎಂಬ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಲಾಯಿತು. ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಕೆ. ಎಸ್. ಇವರು ಆಗಮಿಸಿದ್ದು, ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ಬಗ್ಗೆ ಮಾರ್ಗದರ್ಶನವನ್ನು ನೀಡಿದರು. ಈ ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಬಿ. ಎ. ಕುಮಾರ ಹೆಗ್ಡೆ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸುವುದರೊಂದಿಗೆ ಛಾಯಾಗ್ರಹಣದ ಮಹತ್ವವನ್ನೂ ತಿಳಿಸಿದರು.


ಪ್ರಸ್ತುತ ದಿನಗಳಲ್ಲಿ ಕೌಶಲ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಛಾಯಾಗ್ರಹಣ ಎಂಬುದು ಮಹತ್ವದ ಸ್ಥಾನವನ್ನೂ ಪಡೆದಿದೆ. ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಸ್ಯಸೌರಭದ ಸದಸ್ಯರಿಗೆ ಈ ವೇದಿಕೆಯನ್ನು ಸಸ್ಯಶಾಸ್ತ್ರ ವಿಭಾಗವು ಒದಗಿಸಿಕೊಟ್ಟಿದ್ದು ಹಲವಾರು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇದರ ಪ್ರಯೋಜನಗಳನ್ನು  ಪಡೆಯಲಿದ್ದಾರೆ.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಛಾಯಾಗ್ರಹಣದ ಮೂಲಭೂತ ಅಂಶಗಳು, ಬೆಳಕಿನ ನಿರ್ವಹಣೆ, ಎಡಿಟಿಂಗ್ ಮೊದಲಾದ ತಾಂತ್ರಿಕ ವಿಷಯಗಳನ್ನು ತಿಳಿದುಕೊಳ್ಳಲಿದ್ದಾರೆ. ಎಸ್.ಡಿ.ಎಂ. ಕಾಲೇಜ್ ಆವರಣ ಮತ್ತು ಆರ್ಬೋರೇಟಂನಲ್ಲಿ ಪ್ರಾಯೋಗಿಕವಾಗಿ ಛಾಯಾಗ್ರಹಣದ ಕುರಿತು ಮಾಹಿತಿಯನ್ನು ನೀಡಲಿದ್ದು ವಿದ್ಯಾರ್ಥಿಗಳು ತೆಗೆದ ಛಾಯಾಚಿತ್ರಗಳಲ್ಲಿನ ಸರಿ-ತಪ್ಪುಗಳನ್ನು ಆಯಾ ಸ್ಥಳದಲ್ಲಿ ಗುರುತಿಸಿ ಅವುಗಳ ಬಗ್ಗೆ ಮಾರ್ಗದರ್ಶನವನ್ನು ನೀಡಲಿದ್ದಾರೆ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top