ವರ್ಷಿತ್ ಜೆ 97.65 ಪರ್ಸಂಟೈಲ್,7027 ರಾಷ್ಟೀಯ ರ್‍ಯಾಂಕ್ ಮತ್ತು ಕಾರ್ತಿಕ್ ಎಸ್ ನಾಯ್ಕ್ 903 ರಾಷ್ಟ್ರೀಯ ರ್‍ಯಾಂಕ್
ಉಡುಪಿ: ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ 2023ನೇ ವರ್ಷದ ಜೆ ಇ ಇಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಅನೇಕ ವಿದ್ಯಾರ್ಥಿಗಳು 90 ಪರ್ಸಂಟೈಲ್‍ಗಳಿಗಿಂತಲೂ ಅಧಿಕ ಅಂಕ ಪಡೆದು ತಂದಿರುತ್ತಾರೆ.
ಅತ್ಯುತ್ತಮ ಅಂಕಗಳನ್ನು (ಪರ್ಸಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ:
ವರ್ಷಿತ್ ಜೆ (ಬಂಟ್ವಾಳದ ಜಯಂತ ಆರ್ ಮತ್ತು ಸೌಮ್ಯ ಇವರ ಪುತ್ರ) ಇವರು 97.65 ಹಾಗೂ 7027 ರಾಷ್ಟ್ರೀಯ ರ್‍ಯಾಂಕ್, ರಾಜ್‍ಕಿರಣ್ (ಪುತ್ತೂರಿನ ವಿದ್ಯಾಶಂಕರ ಹಾಗೂ ವೀಣಾ ಎಸ್ ಇವರ ಪುತ್ರ)97.28 ಹಾಗೂ 8322 ರಾಷ್ಟ್ರೀಯ ರ್‍ಯಾಂಕ್, ವಿಪುಲ್‍ಎಸ್ (ತುಮಕೂರಿನ ಎಂ ಪಿ ಶ್ರೀಧರ ಹಾಗೂ ಯಶಸ್ವಿನಿ ಕೆಎಸ್‍ಇವರ ಪುತ್ರ) ಇವರು 95.96,ಹಾಗೂ 12937 ರಾಷ್ಟ್ರೀಯ ರ್ಯಾಂರ್‍ಯಾಂಕ್, ಕಶ್ಯಪ್ ಕೆ (ಪುತ್ತೂರಿನ ಕಿಶೋರ್ ಕುಮಾರ್ ಹಾಗೂ ರೂಪಶ್ರೀ ಕೆ ಇವರ ಪುತ್ರ) 93.6 ಹಾಗೂ 11740 ರಾಷ್ಟ್ರೀಯ ರ್‍ಯಾಂಕ್,ಮನಸ್ವಿ ಭಟ್ ಕೆ (ಪುತ್ತೂರಿನ ಕೇಶವ ರಾಮ ಕೆ ಹಾಗೂ ಶೈಲಜಾ ಭಟ್ ಇವರ ಪುತ್ರಿ) 93.46, ವೇದಾಕ್ಷ ಎಂ (ಪುತ್ತೂರಿನ ರಮೇಶ ಎಂ ಹಾಗೂ ಬೇಬಿ ಇವರ ಪುತ್ರ) 93.2,ದೈವಿಕ್ ರಾಜೇಶ್ (ಪುತ್ತೂರಿನ ರಾಜೇಶ್ ಜಗನ್ನಾಥ್‍ರಾವ್ ಹಾಗೂ ಶ್ವೇತಾ ಹೆಗ್ಡೆ ಇವರ ಪುತ್ರ) 92.46,ಕಾರ್ತಿಕ್ ಎಸ್ ನಾಯ್ಕ್ (ಪುತ್ತೂರಿನ ಸುಬ್ಬಣ್ಣ ಬಿ ಹಾಗೂ ಎಸ್ ಪ್ರೇಮಲತಾ ಇವರ ಪುತ್ರ) 91.83 ಹಾಗೂ 903 ಪರಿಶಿಷ್ಟ ವರ್ಗದ ರಾಷ್ಟ್ರೀಯ ರ್‍ಯಾಂಕ್,ಆಶ್ರಯ ಪಿ (ಪುತ್ತೂರಿನ ಆಶೋಕ ಕುಂಬ್ಲೆ ಹಾಗೂ ಶೋಭ ಬಿ ಇವರ ಪುತ್ರಿ) 91.82, ಅರುಣ್ ಎನ್ (ಪುತ್ತೂರಿನ ನಾರಾಯಣ ಹಾಗೂ ಹೇಮಲತಾ ಇವರ ಪುತ್ರ) 91.5,ಪ್ರಣವ್ ಜಿ ಎನ್ (ಕಾಸರಗೋಡಿನ ಗಿರೀಶ್ ಎನ್ ಹಾಗೂ ಶುಭಶ್ರೀ ಇವರ ಪುತ್ರ) 90.79, ಅಮೋಘ ಎ ಪಿ (ಪುತ್ತೂರಿನ ಅಶೋಕ ಪಿ ಹಾಗೂ ಚೇತನಾವಾಣಿ ಇವರ ಪುತ್ರ) 90.35, ನಿಶ್ಚಲ್ ಕೆ ಜೆ (ಪುತ್ತೂರಿನ ಜನಾರ್ದನ ಕೆ ಬಿ ಹಾಗೂ ಜ್ಯೋತಿ ಕೆ ಬಿ) 89.43 ಪರ್ಸಂಟೈಲ್ ಪಡೆದುಕೊಂಡಿರುತ್ತಾರೆ.
ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ಪೋಷಕರು ಶುಭ ಹಾರೈಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ