ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ, ಪುನಃಪ್ರತಿಷ್ಠೆ- ಪೂರ್ವಭಾವಿ ಸಭೆ

Upayuktha
0

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ - ಪುನಃಪ್ರತಿಷ್ಠಾಪನೆ ಪ್ರಯುಕ್ತ ಪೂರ್ವಭಾವಿ ಸಭೆ ಬಪ್ಪಳಿಗೆಯಲ್ಲಿನ ಸುಬ್ರಹ್ಮಣ್ಯ ನಟ್ಟೋಜ ಅವರ ನಿವಾಸ ಶ್ರೀ ಚಕ್ರದಲ್ಲಿ ಭಾನುವಾರ ನಡೆಯಿತು. ವಿವಿಧ ಧಾರ್ಮಿಕ ಕ್ರಿಯೆಗಳು, ಆಹ್ವಾನ ಪತ್ರಿಕೆ ತಯಾರಿಕೆ, ಭಕ್ತಾದಿಗಳ ಊಟೋಪಚಾರವೇ ಮೊದಲಾದ ಸಂಗತಿಗಳ ಬಗೆಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುನಃಪ್ರತಿಷ್ಠಾಪನೆ ನೆಲೆಯಲ್ಲಿ ಸಮಿತಿಯನ್ನು ರಚಿಸಲಾಯಿತು. 


ಗೌರವಾಧ್ಯಕ್ಷರಾಗಿ ನಟ್ಟೋಜ ಶಿವಾನಂದ ರಾವ್ ಹಾಗೂ  ಬಾಲಚಂದ್ರ ನಟ್ಟೋಜ, ಅಧ್ಯಕ್ಷರಾಗಿ ಎನ್.ಕೆ.ಜಗನ್ನಿವಾಸ ರಾವ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸೀತಾರಾಮ ಭಟ್ ಬಿ., ರವಿಕೃಷ್ಣ ಡಿ. ಕಲ್ಲಾಜೆ, ಎನ್.ಎಸ್. ಶಾಂತಾರಾಮ ರಾವ್, ಎನ್.ಎಸ್.ದಿನೇಶ ರಾವ್, ಕಿರಣ್ ಕುಮಾರ್ ರೈ, ಕೆ.ಮಾಧವ ಗೌಡ ಕಾಂತಿಲ, ಎನ್.ಎಸ್.ನಟರಾಜ್, ಮೋಹನ ನೆಲ್ಲಿತ್ತಾಯ ಆಯ್ಕೆಗೊಂಡರೆ ಕಾರ್ಯದರ್ಶಿಗಳಾಗಿ ಸುಬ್ರಹ್ಮಣ್ಯ ನಟ್ಟೋಜ, ಜತೆ ಕಾರ್ಯದರ್ಶಿಗಳಾಗಿ ಕೃಷ್ಣರಾಜ ಎನ್.ಎಸ್, ಬೊಳ್ಳಾವ ವಿದ್ಯಾಶಂಕರ, ಬಲ್ನಾಡು ಪ್ರಸನ್ನ ಎನ್. ಭಟ್ ಜವಾಬ್ದಾರಿ ವಹಿಸಿಕೊಂಡರು. ಕೋಶಾಧಿಕಾರಿಗಳಾಗಿ ಬಾಲಕೃಷ್ಣ ರಾವ್ ಎಂ ಆಯ್ಕೆಯಾದರು. ಸದಸ್ಯರಾಗಿ ಅನಾರು ಬಾಲಕೃಷ್ಣ ರಾವ್, ಪರಮೇಶ್ವರಿ ಭಟ್ ಬಬ್ಬಿಲಿ, ಪ್ರಕಾಶ್ ಕಲ್ಲಾಡಿ, ಆನಂದ ಸುವರ್ಣ, ವಾಟೆ ಎಚ್.ವಿ.ಶಾಂತಾರಾಮ ರಾವ್, ಎಸ್. ಸುಬ್ಬರಾವ್, ಬಾಬು ಪೂಜಾರಿ, ಮದಕ ನಾರಾಯಣ ಗೌಡ, ಕೃಷ್ಣಪ್ಪ ಗೌಡ, ರಾಮಣ್ಣ ಗೌಡ ಕರ್ಕುಂಜ ಹಾಗೂ ಬಾಳಪ್ಪ ಗೌಡ ಕರ್ಕುಂಜ ಆಯ್ಕೆಯಾದರು.


ಎನ್.ಕೆ.ಜಗನ್ನಿವಾಸ ರಾವ್ ಮಾತನಾಡಿ, ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಲಕಯದ ಪುನಃಪ್ರತಿಷ್ಠೆ ಸಮಸ್ತ ಊರಿಗೆ ಸಂಬಂಧಿಸಿದ್ದು. ಊರವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರರಾಗುವಂತಾಗಬೇಕು. ತಮಗೆ ದೊರೆತ ಜವಾಬ್ಧಾರಿಯನ್ನು ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ, ವಿಧಿ ವಿಧಾನಗಳು ಯಶಸ್ವಿಯಾಗಿ ಜರಗುವಂತೆ ನೋಡಿಕೊಳ್ಳಬೇಕು ಎಂದು ನುಡಿದರು. 


ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನ ತೊಟ್ಟಿಲಕಯ ನಟ್ಟೋಜ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿದ್ದರೂ ದೇವರು ಎಲ್ಲರಿಗೂ ಸೇರಿದವರಾಗಿದ್ದಾರೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನವಾಗಿರುವ ತೊಟ್ಟಿಲಕಯದ ಅಭಿವೃದ್ಧಿಯು ಪರಿಸರದ ಧರ್ಮಬಂಧುಗಳಿಗೆ ಒಳ್ಳೆಯದನ್ನು ಮಾಡಲಿದೆ. ಆದ್ದರಿಂದ ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿರದೆ ಸಮಸ್ತ ಊರಿನ ಕಾರ್ಯಕ್ರಮ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.


ಈ ಸಂದರ್ಭ ಬಲ್ನಾಡು ಸುಧನ್ವ ಶಾಸ್ತ್ರಿ, ಎಚ್.ವಿ.ಶಾಂತಾರಾಮ ರಾವ್, ಎನ್.ಹರೀಶ್, ನಟ್ಟೋಜ ಕುಟುಂಬಸ್ಥರಾದ ರಾಜಶ್ರೀ ಎಸ್ ನಟ್ಟೋಜ, ಶ್ರೀಕೃಷ್ಣ ನಟ್ಟೋಜ ಉಪಸ್ಥಿತರಿದ್ದರು. ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top