ಪುಂಜಾಲಕಟ್ಟೆ: ಸ್ಕೌಟ್ಸ್‌, ಗೈಡ್ಸ್, ರೋವರ್ಸ್-ರೇಂಜರ್ಸ್ ಘಟಕದಿಂದ 3 ದಿನಗಳ ಬೇಸಿಗೆ ಶಿಬಿರ

Upayuktha
0



ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಆಂತರಿಕ ಗುಣಮಟ್ಟದ ಭರವಸೆ ಕೋಶ, ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರೋವರ್ಸ್ ಮತ್ತು ರೇಂಜರ್ಸ್ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಏ.17ರಿಂದ 19ರ ವರೆಗೆ ಮೂರು ದಿನಗಳ ಕಾಲ 2023ನೇ ವರ್ಷದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು ಶಿಬಿರದ ಮೂರನೇ ದಿನವಾದ ಬುಧವಾರ ಧ್ವಜಾರೋಹಣದ ಮೂಲಕ ಶಿಬಿರವನ್ನು ಪ್ರಾರಂಭಿಸಲಾಯಿತು. ನಂತರ ಬಿಪಿ ಸಿಕ್ಸ್ ವ್ಯಾಯಾಮವನ್ನು ಮಾಡಲಾಯಿತು.


ಬಳಿಕ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಮಾರ್ಚ್‌ಪಾಸ್ಟ್  ಬಗ್ಗೆ ಮಾಹಿತಿಯನ್ನು ಶಮೀರ್ ನೀಡಿದರು. ನಂತರ ಸರ್ವಧರ್ಮ ಪ್ರಾರ್ಥನೆಯನ್ನು ಮಾಡಲಾಯಿತು. ಬಳಿಕ ಬೇಸಿಕ್ ನಾಟ್ಸ್ ನ ಬಗ್ಗೆ ಮಾಹಿತಿಯನ್ನು ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಸೀನಿಯರ್ ರೋವರ್ ವಿಶಾಲ್ ಶೆಣೈ ಆಗಮಿಸಿ ವಿದ್ಯಾರ್ಥಿಗಳಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು. ಈ ಅವಧಿಯಲ್ಲಿ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಪ್ರೊ. ಆಂಜನೇಯ‌ ಎಂ ಎನ್. ಕಾಲೇಜಿನ ರೇಂಜರ್ ಲೀಡರ್ ಡಾ. ಪ್ರೀತಿ ಕೆ ರಾವ್ ಹಾಗೂ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಈ ಅವಧಿಯನ್ನು ರೇಂಜರ್ ನವ್ಯಶ್ರೀ ಸ್ವಾಗತಿಸಿ, ರೇಂಜರ್ ರಂಜಿತಾ ಧನ್ಯವಾದವಿತ್ತರು. ರೋವರ್ ಕೀರ್ತಿ ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯವನ್ನು ಮಾಡಿದರು. ರೇಂಜರ್ ಪ್ರಿಯಾ ಶಿಬಿರವಾಣಿಯನ್ನು ಓದಿದರು. ರೇಂಜರ್ ಮೌನಿಕ ಕಾರ್ಯಕ್ರಮವನ್ನು ನಿರೂಪಿಸಿದರು.


ಮಧ್ಯಾಹ್ನದ ನಂತರ ಬ್ಯಾಡ್ಜ್ ಗಳ ಬಗ್ಗೆ ಮಾಹಿತಿಯನ್ನು ರೇಂಜಸ್ ವಿದ್ಯಾರ್ಥಿಗಳು ನೀಡಿದರು. ನಂತರ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಚಟುವಟಿಕೆಯನ್ನು ಮಾಡಲಾಯಿತು.


ಬಳಿಕ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ರೇಂಜರ್ ಲೀಡರ್ ಆದ ಡಾ. ಪ್ರೀತಿ ಕೆ ರಾವ್ ಶಿಬಿರದ ಬಗ್ಗೆ ಮಾತುಗಳಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.‌ ಟಿ.ಕೆ ಶರತ್ ಕುಮಾರ್ ಬೇಸಿಗೆ ಶಿಬಿರದ ಬಗ್ಗೆ ರೋವರ್ಸ್ ರೇಂಜರ್ಸ್ ಘಟಕದ ಬಗ್ಗೆ ಮಾತುಗಳನ್ನಾಡಿದರು. ರೇಂಜರ್ ನವ್ಯಶ್ರೀ ಯು ರೋವರ್ ಕೀರ್ತಿ ಶಿಬಿರದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಕೆ ಶರತ್ ಕುಮಾರ್, ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಆಂಜನೇಯ ಎಂ ಎನ್. ರೇಂಜರ್ ಲೀಡರ್ ಡಾ. ಪ್ರೀತಿ ಕೆ ರಾವ್, ರೋವರ್ ಮತ್ತು ರೇಂಜರ್ ಲೀಡರ್ ಕೀರ್ತಿ ಮತ್ತು ತೃಪ್ತಿ ಹಾಗೂ ಕಾಲೇಜಿನ ಎಲ್ಲಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.‌

ಕಾರ್ಯಕ್ರಮವನ್ನು ರೋವರ್ ಕಾರ್ತಿಕ್ ಸ್ವಾಗತಿಸಿ ರೇಂಜರ್ ಸೌಜನ್ಯ ಧನ್ಯವಾದವಿತ್ತರು. ರೋವರ್ ಪ್ರತೀಕ್ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top