ಗಮಕ ಕಲೆಗೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ: ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್

Upayuktha
0

ಬೆಳಗಾವಿ: ಕರ್ನಾಟಕ ಸರ್ಕಾರವು ಗಮಕ ಕಲೆಯನ್ನು ಈಗಿನ ನೂತನ ಶಿಕ್ಷಣ ಪದ್ಧತಿಯಲ್ಲಿ ಸೇರಿಸಬೇಕು. ಗಮಕ ಕಲೆಗೆ ಪ್ರತ್ಯೇಕವಾದ ಅಕಾಡಮಿಯನ್ನು ಸ್ಥಾಪಿಸಿ ಹೆಚ್ಚಿನ ಪ್ರಚಾರ ಮತ್ತು ಪುಷ್ಟಿಯನ್ನು ತರಲು ಪ್ರಯತ್ನಿಸಬೇಕೆಂದು ಕರ್ನಾಟಕ ಕಲಾಶ್ರೀ ಗಮಕಿ ತೆಕ್ಕಿಕೆರೆ ಸುಬ್ರಹ್ಮಣ್ಯ ಭಟ್‌ ಹೇಳಿದರು.


ಬೆಂಗಳೂರಿನ ಕನ್ನಡ ಮತ್ತು ಸಂಸೃತಿ ಇಲಾಖೆ, ಕರ್ನಾಟಕ ಗಮಕ ಕಲಾ ಪರಿಷೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ, ವಾಗ್ದೇವಿ ಸಂಗೀತ-ಗಮಕ ಕಲಾ ಸಂಘದ ಸಹಯೋಗದೊಂದಿಗೆ ಭಾನುವಾರ ಅನಗೋಳದಲ್ಲಿರುವ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 13ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ ಉದ್ಭಾಟಸಿ ಅವರು ಮಾತನಾಡಿದರು.


ಸರಕಾರ ಗಮಕ ಕಲೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವುದಲ್ಲದೆ. ಕನ್ನಡ ಶಿಕ್ಷಕರ ತರಬೇತಿಯ ಪಠ್ಯದಲ್ಲಿ ಗಮಕ ಕಲೆಯನ್ನು ಒ೦ದು ವಿಷಯವಾಗಿ ಅಭ್ಯಸಿಸುವಂತೆ ಮಾಡಿದಲ್ಲಿ ಗಮಕ ಕಲೆಗೆ ಮಾತ್ರವಲ್ಲದೇ ಕನ್ನಡ ಭಾಷೆ. ಸಾಹಿತ್ಯವನ್ನೂ ತು ಗ ಎಂದು ಹೇಳಿದರು. ಗಮಕ ಸುಧೆ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಶಿಕ್ಷಣ ತಜ್ಞ ಪರಮೇಶ್ವರ ಹೆಗಡೆ ಮಾತನಾಡಿ, ಹಿರಿಯರಷ್ಟೇ ಅಲ್ಲದೆ ಚಿಕ್ಕ ಚಿಕ್ಕ ಮಕ್ಕಳೂ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಕಂಡಾಗ ನಾವು ಕಲಾ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗುವಂಥವರು. ಗಮಕ ಕಲೆಗೆ ಸಾವಿಲ್ಲ. ಶಾಶ್ವತವಾದಂತಹ ಈ ಕಲೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿಯನ್ನು ಭಾರತಿ ಭಟ್‌ ಹೊತ್ತುಕೊಂಡು ಹೋಗುತ್ತಿರುವ ಕಾರ್ಯ ಮಹತ್ತರವಾದದ್ದು ಎಂದು ಹೇಳಿದರು. 


ಸಮ್ಮೇಳನದ  ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾಶ್ರೀ, ಗಂಗಮ್ಮ ಕೇಶವ ಮೂರ್ತಿ ಮಾತನಾಡಿ. ಮಕ್ಕಳು, ಹಿರಿಯರು ಎಲ್ಲರೂ ಸೇರಿ ಕಲೆಯನ್ನು ಬೆಳೆಸುವತ್ತ ಮುಂದಾದಾಗ ಮಾತ್ರ ಗಮಕ ಉಳಿಯಲು ಬೆಳೆಯಲು ಸಾಧ್ಯ ಎಂದು ಹೇಳಿದರು. 


ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್‌ ದಂಪತಿ, ಗಂಗಮ್ಮ ಕೇಶವಮೂರ್ತಿ, ಪರಮೇಶ್ವರ ಹೆಗಡೆ, ಎಲ್‌.ಎಸ್‌. ಶಾಸ್ತಿ ಪಿ.ಬಿ. ಸ್ಥಾಮಿ, ಸುಜಾತಾ ದಪ್ತರದಾರ, ಕೆ. ಭಾರತಿ ಭಟ್‌, ದಕ್ಷಿಣಾಮೂರ್ತಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾವಗೀತೆ, ಭಕ್ತಿಗೀತೆ. ನಾಟಕ, ಗಮಕ ರೂಪಕ, ಜಾನಪದ ಗೀತೆ, ದೇಶಭಕ್ತಿ ಗೀತೆ, ಜಾನಪದ ಗೀತೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಮುಂತಾದ ಕಾರ್ಯಕ್ರಮಗಳು ಜರುಗಿದವು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಎಲ್‌.ಎಸ್‌. ಶಾಸ್ತಿ ಆಗಮಿಸಿದ್ದರು. ಭಾರತಿ ಮಹಾದೇವ ಭಟ್‌ ಸ್ವಾಗತಿಸಿದರು. ದಕ್ಷಿಣಾಮೂರ್ತಿ ಪ್ರಾಸ್ತಾವಿಕ ' ಭಾಷಣ ಮಾಡಿದರು. ಪ್ರಸನ್ನ ಮತ್ತು ಶಾಂತ ಪ್ರಾರ್ಥಿಸಿದರು. ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಟಿ.ಆರ್‌. ಗಣಪತಿ ವಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top