ಇದು ತಾತ್ಕಾಲಿಕ ಗಮ್ಮತ್ತಿನ ಊಟ!! ನಮ್ಮದು ಶಾಶ್ವತ ಗಮ್ಮತ್ತಾಗಲಿ!!

Upayuktha
0


ಳ್ಳಿ ಹಳ್ಳಿಗಳಲ್ಲಿ ಪಕ್ಷ, ಧರ್ಮಗಳ ರಾಜಕಾರಣ ಬಿತ್ತಿ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೊಲ್ಲ ಅನ್ನುವ ಪರಸ್ಪರ ನಿಂದನೆಯ ಪ್ರಚೋದನೆಯ ಭಾಷಣ ಮಾಡಿ, ವೈಷಮ್ಯದ ವಾತಾವರಣ ಸೃಷ್ಟಿ ಮಾಡಿ, ಅಲ್ಲಿ ಎಲ್ಲ ಒಟ್ಟಿಗೆ ಕುಳಿತು ಊಟ ಮಾಡ್ತಾ ಇದಾರೆ!!  ಗಮ್ಮತ್ತ್ ಅಲ್ವಾ?


ನಾವು ಮಾತ್ರ ಇಲ್ಲಿ ಇವರು ಆ ಪಕ್ಷದವರು, ಅವರು ಈ ಪಕ್ಷದವರು ಅಂತಲೂ, ಅವರ ಜೊತೆ ಮಾತಾಡಿದರೆ ಇವರು ಅವರ ಪಕ್ದವರು, ಇವರ ಜೊತೆ ಮಾತಾಡಿದರೆ ಇವರು ಇವರ ಪಕ್ಷದವರು ಅಂತ ಬ್ರಾಂಡಿಂಗ್ ರಾಜಕಾರಣ ನೆಡೆಯುತ್ತಾ ಇರುತ್ತೆ!! ಮತ್ತೊಂದು ಎಲಕ್ಷನ್ ಬಂದರೂ ಒಂದು ವೈಮನಸ್ಯ ಶಾಶ್ವತವಾಗಿ ಎಲ್ಲರಲ್ಲೂ ಉಳಿಯುವಂತೆ ಜನ ಪ್ರತಿನಿಧಿಗಳು ನಮ್ಮಲ್ಲಿ ಬೀಜ ಬಿತ್ತುವ ರೀತಿ ವರ್ತಿಸುತ್ತಿದ್ದಾರೆ. ಸಾಮಾನ್ಯ ಜನ ಎಲ್ಲ ರಾಜಕಾರಣಿಗಳ ಸೂತ್ರದ ಗೊಂಬೆ ಆಗಿದ್ದಾರೆ!!!


ಮೊನ್ನೆ BJP ಮುಖಂಡರು ಬಂದಾಗ ಅಲ್ಲಿದ್ರಿ? ಇವತ್ತು ಕೈ ಪಕ್ಷದ ಮುಖಂಡರು ಬಂದಾಗ ಇವರ ಸಭೆಯಲ್ಲೂ ಇದ್ದೀರಿ? ಅಂತ ಪ್ರಶ್ನೆ ಮಾಡ್ತಾರೆ. ನಾಳೆ ಜಾತ್ಯಾತೀತ ದಳದವರು ಬಂದಾಗಲೂ ಆ ಸಭೆಗೆ ಬರುವ ಮನಸ್ಥಿತಿಯವರಾದರೆ ಒಳ್ಳೇದಲ್ವಾ? ಉಳಿದೊಂಬತ್ತು ಪಕ್ಷೇತರರು ಬಂದು ಮೈಕ್ ಹಿಡಿದು ಭಾಷಣಕ್ಕೆ ನಿಂತರೆ ಪುರುಸೊತ್ತು ಇದ್ದರೆ ಮುಂದುಗಡೆ ಬಂದು ಆ ಸಭೆಯಲ್ಲಿ ಕೂರುವ ಸ್ವತಂತ್ರ ರಾಜಕೀಯ ಆಸಕ್ತಿ ನಮ್ಮಲ್ಲಿ ಇರಲಿ ಆಗಲ್ವಾ? ಹಾಗೆ ಬಂದು ಕುಳಿತು ಭಾಷಣ ಕೇಳಿದವರನ್ನು ಒಬ್ಬ ಸಿನಿಮಾ ಪ್ರೇಕ್ಷಕನಂತೆ ಭಾವಿಸುವುದಕ್ಕೆ ಸಾಧ್ಯವಿಲ್ಲವಾ!!? ಅಲ್ಲಿ ಶಿವರಾಜ್‌ಕುಮಾರ್ ಕಡೆಯ ಪ್ರೇಕ್ಷಕ, ದರ್ಶನ್ ಕಡೆಯ ವೀಕ್ಷಕ, ಗೋಲ್ಡ್ನ್ ಸ್ಟಾರ್ ಗಣೇಶ್ ಕಡೆಯವನು... ಅಂತೆಲ್ಲ ಸಾಮಾನ್ಯವಾಗಿ ವಿಂಗಡಣೆ ಇರುವುದಿಲ್ಲ


ಹಾಗಿರುವುದೇ ಸರಿ ಅಲ್ವಾ!!?

ಯಾವುದೋ ಪಕ್ಷದ ಕಾರ್ಯಕರ್ತರಾದರೂ ಹೀಗೆ ಮಾಡಬಹುದು ಅಲ್ವಾ?


ಯಡಿಯೂರಪ್ಪ, ಜಮೀರ್, ಬೊಮ್ಮಾಯಿ, ರೆಡ್ಡಿ, ಅಶೋಕ್, ಸಿದ್ದರಾಮಯ್ಯನವರ ನಡುವೆ ಕೇವಲ ರಾಜಕೀಯ ವೈಷಮ್ಯ ಇರುತ್ತೆ!! ಆದರೆ, ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಮತದಾರರ ನಡುವೆ ಈಗೀಗ ಕೇವಲ ರಾಜಕೀಯ ವೈಷಮ್ಯ ಅಲ್ಲ, ರಾಜಕೀಯದಿಂದ ಪ್ರೇರಿತವಾಗಿ ವೈಯುಕ್ತಿಕ ಮತ್ತು ಕೌಟುಂಬಿಕ ವೈಷಮ್ಯ ಆಗಿದೆ. ಅದು ದ್ವೇಷಕ್ಕೂ ಕಾರಣವಾಗಿದೆ, ಆಗುತ್ತಿದೆ.  


ಮತದಾರರು, ಕಾರ್ಯಕರ್ತರು, ಎಲ್ಲ ಜನ ಪ್ರತಿನಿಧಿಗಳು ಎಲೆಕ್ಷನ್ ಮುಗಿದ ಮೇಲೆ, ಚುನಾವಣೆಯನ್ನು ಒಂದು ಮುಗಿದ ಕ್ರೀಡೆ ಅಂತ ಭಾವಿಸಿ ಒಟ್ಟಾಗಿ ಬೆರೆತರೆ ಇಡೀ ಹಳ್ಳಿ, ಊರು, ರಾಜ್ಯ, ದೇಶ ಎಲ್ಲವೂ ಇನ್ನಷ್ಟು ಗಮ್ಮತ್ತಾಗಿ ಇರಬಹುದೇನೋ ಅಲ್ವಾ?.


ಓಟಿಗಾಗಿ ಕೊಡುವ ದರಿದ್ರ ಸೀರೆ, ಬ್ಲಾಸ್ಟಿಂಗ್ ಕುಕ್ಕರ್, ಪಾಪದ ಹಣ, ಸುಳ್ಳು ಬರವಸೆಗಳು, ಅಸಾಧ್ಯವಾದ ಆಶ್ವಾಸನೆಗಳಿಗೆ ಮರುಳಾಗದೆ ಪ್ರಜ್ಞಾವಂತ ಮತದಾರನಾಗಿ, ಪವಿತ್ರ ಮತದಾನದ ಕರ್ತವ್ಯ (ಮಾರಾಟ ಮಾಡದೆ) ಮಾಡಿ, ಒಟ್ಟಾಗಿ ಗಮ್ಮತ್ತಾಗಿ ಇರೋಣ.


ಚಿತ್ರದಲ್ಲಿ ಗಮ್ಮತ್ತಾಗಿ ಊಟ ಮಾಡುತ್ತಿರುವವರದು... ಗಮ್ಮತ್ತು ಕ್ಷಣಿಕವಾದುದು.  ನಮ್ಮ  ಗಮ್ಮತ್ತು ಶಾಶ್ವತವಾಗಲಿ.  


-ಅರವಿಂದ ಸಿಗದಾಳ್, ಮೇಲುಕೊಪ್ಪ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top