ನಿಟ್ಟೆ: ಏ.21 ರಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶವನ್ನು ಗಳಿಸುವುದರ ಮೂಲಕ ಉತ್ತಮ ಸಾಧನೆಗೈದಿದೆ.
ವಿಜ್ಞಾನ ವಿಭಾಗದಲ್ಲಿ ಕು.ನೀತಾ ನಾಯಕ್ ಅವರು 6೦೦ ರಲ್ಲಿ 590 (ENG: 95, HIN: 98, PHY:99, CHEM: 98, MATHS: 100, CS: 100) ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿರುವರು. ವಿಜ್ಞಾನ ವಿಭಾಗದ ಇನ್ನೋರ್ವ ವಿದ್ಯಾರ್ಥಿನಿ ವಿಶಿತಾ ಅವರು 600 ರಲ್ಲಿ 588 (ENG: 90, HIN: 98, PHY: 100, CHEM: 100, MATHS: 100, CS: 100) ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 9ನೇ ಸ್ಥಾನ ಗಳಿಸಿರುತ್ತಾರೆ. ಇವರಂತೆಯೇ ವಿದ್ಯಾರ್ಥಿ ಚಿರಾಗ್ ಸಂದೇಶ್ ಶೆಟ್ಟಿ (ENG: 90, HIN: 98, PHY: 100, CHEM: 94, MATHS: 99, CS: 100) ಹಾಗೂ ವಿಶ್ಮಿತಾ ವಿ ಸಾಲ್ಯಾನ್ (ENG: 95, KAN: 95, PHY: 99, CHEM: 93, MATHS: 99, BIO: 98) ಅಂಕಗಳನ್ನು ಗಳಿಸಿ ಉತ್ತಮ ಸಾಧನೆಗೈದಿರುವರು.
ವಾಣಿಜ್ಯ ವಿಭಾಗದಲ್ಲಿ ವಿನಿಶಾ ವಯಲೆಟ್ ಸೀಕ್ವೆರಾ ENG:90, HIN:95, ECO:98, BS:100, A/C:100, CS:100 (583/600), ನಿಶಾ ಯು ಶೆಟ್ಟಿ ENG:90, KAN:98, ECO:96, BS:100, A/C:100, CS:99 (583/600), ದೀಕ್ಷಾ ENG:97, HIN:96, ECO:96, BS:95, A/C:98, CS:100 (582/600), ದಿಶಾ ಯು ಶೆಟ್ಟಿ ENG:90, KAN:99, ECO: 97, BS:100, A/C:96, CS:98 (580/600) ಅಂಕಗಳನ್ನು ಗಳಿಸುವುದರೊಂದಿಗೆ ಉತ್ತಮ ಸಾಧನೆಗೈದಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದಿಸಿರುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ