ಪರಿಸರ ಅಧ್ಯಯನಕ್ಕೆ ದೂರಸಂವೇದಿ ತಂತ್ರಜ್ಞಾನವೊಂದು ಅದ್ಭುತ ವರದಾನ: ಡಾ. ಗಂಗಾಧರ್ ಭಟ್

Upayuktha
0

 

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ- ವನಶ್ರೀ ಹಾಗೂ ಡಾ. ಬಿ ದಯಾನಂದ ಪೈ ಸತೀಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ  ಒಂದು ದಿನದ ಎನ್.ಇ.ಪಿ ಪ್ರಾಯೋಗಿಕ ಪಠ್ಯಕ್ರಮದ ಕಾರ್ಯಗಾರವನ್ನ ಪ್ರಾಂಶುಪಾಲರಾದ ಡಾ. ಜಯಕರ್ ಭಂಡಾರಿ ಅವರು ಉದ್ಘಾಟಿಸಿದರು.


ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಎನ್ಇಪಿ  ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಆಯಾಮಗಳು ಮತ್ತು  ವಿದ್ಯಾರ್ಥಿಗಳ ಅಗತ್ಯತೆ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆಯ ಎಸ್.ಡಿ.ಎಂ  ಕಾಲೇಜಿನ ಪ್ರಾಂಶುಪಾಲರು ಹಾಗೂ ವನಶ್ರೀ ಅಧ್ಯಕ್ಷ ಡಾ. ಕುಮಾರ್ ಹೆಗ್ಡೆ, ಸಸ್ಯಶಾಸ್ತ್ರದಲ್ಲಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮತ್ತು  ಮುಂದಿನ ದಿನಗಳಲ್ಲಿ ಸಸ್ಯಶಾಸ್ತ್ರದಲ್ಲಿನ ಅವಕಾಶಗಳ ಕುರಿತು ಮಾತನಾಡಿದರು. 


ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಲ್ಲೊಬ್ಬರಾದ ಡಾ. ಗಂಗಾಧರ್ ಭಟ್ ಅವರು (Remote Sensing) ದೂರಸಂವೇದಿ ಹಾಗೂ ಸಸ್ಯ ವರ್ಗದ ವಿಶ್ಲೇಷಣೆ ಕುರಿತಾಗಿ ಸವಿಸ್ತಾರ ಮಾಹಿತಿ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಡಾ. ಸಿದ್ದರಾಜು ಎಂ ಎನ್  ಅವರು ಪರಿಸರ ಅಧ್ಯಯನದ ಪರಿಕರಗಳು ಮತ್ತು ತಂತ್ರಗಳು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. 


ಕಾರ್ಯಕ್ರಮವು ಎನ್.ಎಂ.ಸಿ ಕಾಲೇಜಿನ ಕೃತಿಕಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ವನಶ್ರೀ ಸಂಘದ ಕಾರ್ಯದರ್ಶಿ ಡಾ.ವಿನಾಯಕ ಕೆ ಎಸ್ ಇವರು ಸ್ವಾಗತಿಸಿದರೆ, ಕುಲದೀಪ್ ವಂದಿಸಿದರು. 


ಇದೇ ಸಂದರ್ಭದಲ್ಲಿ ಮಡಿಕೇರಿ ಎಫ್.ಎಂ.ಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಮತ್ತು ಎಂ.ಜಿ.ಎಂ  ಉಡುಪಿ ಕಾಲೇಜಿನ  ಉಷಾರಾಣಿ ಯವರನ್ನು ವನಶ್ರೀ ವತಿಯಿಂದ ಸನ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top