ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಎಲ್ಲಾ ಕಾಲೇಜು/ವಿದ್ಯಾಸಂಸ್ಥೆಗಳಿಂದ ಶೈಕ್ಷಣಿಕ ವಷ೯ 2023-24 ನೇ ಸಾಲಿಗೆ ಸಂಯೋಜಿತ ಕಾಲೇಜುಗಳಿಗೆ ಹೊಸ ವ್ಯಾಸಂಗ ಕ್ರಮ ಮತ್ತು ಹೊಸ ವಿಷಯಗಳು/ಮುಂದುವರಿಕೆ/ವಿಸ್ತರಣಾ ಸಂಯೋಜನೆ/ವಿದ್ಯಾಥಿ೯ ಪ್ರಮಾಣ ಹೆಚ್ಚಳ/ ಕಾಲೇಜಿನ ಹೆಸರು ಬದಲಾವಣೆ/ಮ್ಯಾನೇಜ್‌ಮೆಂಟ್ ಬದಲಾವಣೆ ಮತ್ತು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಆಸಕ್ತ ವಿದ್ಯಾ ಸಂಸ್ಥೆಗಳಿಂದ ಹೊಸ ಸಂಯೋಜನೆ ನೀಡುವ ಬಗ್ಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು UUCMS portal (www.uucms.karnataka.gov.in) ಮುಖಾಂತರ ಅರ್ಜಿ ಶುಲ್ಕ ರೂ.2,000 ದೊಂದಿಗೆ ಮೇ 06, 2023 ರೊಳಗೆ ಹಾಗೂ ದಂಡ ಶುಲ್ಕ ರೂ.10,000 ದೊಂದಿಗೆ ಮೇ 10, 2023 ರೊಳಗೆ ಸಲ್ಲಿಸಬಹುದಾಗಿದೆ. ಅರ್ಜಿಯ ಒಂದು ಪ್ರತಿಯನ್ನು ಕುಲಸಚಿವರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.mangaloreuniversity.ac.in ನ್ನು ಅವಲೋಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ