ನವ್ಯಶ್ರೀ ಶೆಟ್ಟಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ ‘ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ’ ವತಿಯಿಂದ ಪ್ರತಿ ವರ್ಷ ನೀಡಲಾಗುವ ‘ಮಾಮ್ ಇನ್‌ಸ್ಪೈರ್’ (MAAM INSPIRE AWARD)ನ ವಾರ್ಷಿಕ ವಿಶೇಷ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಯಾವುದೇ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಮಾಧ್ಯಮ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ವಿದ್ಯಾರ್ಥಿಗಳಿಗೆ ಪದವಿ ವಿಭಾಗದ ‘ಮಾಮ್ ಇನ್‌ಸ್ಪೈರ್’ ಪ್ರಶಸ್ತಿ ನೀಡಲಾಗುತ್ತಿದೆ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿರುವ, ಅಂತಿಮ ವರ್ಷದ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ಮತ್ತು ಸಮಾಜಪರ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ 2020–21 ಹಾಗೂ 2021– 22ನೇ ಶೈಕ್ಷಣಿಕ ಸಾಲಿನ ಪ್ರಶಸ್ತಿಗಳನ್ನು ಒಟ್ಟಾಗಿ ನೀಡಲಾಗುತ್ತಿದೆ. ವಿಜೇತರ ವಿವರ ಈ ಮುಂದಿನಂತಿವೆ.
ಮಾಮ್ ಇನ್‌ಸ್ಪೈರ್ ಪ್ರಶಸ್ತಿ 2020- 21
ಪದವಿ ವಿಭಾಗ: ರಶ್ಮಿ ಯಾದವ್, ಎಸ್‌ಡಿಎಂ ಕಾಲೇಜು ಉಜಿರೆ (ಪ್ರಥಮ), ಯಕ್ಷಿತಾ ಆಳ್ವಾಸ್ ಕಾಲೇಜು, ಮೂಡಬಿದ್ರಿ (ದ್ವಿತೀಯ), ನವ್ಯಶ್ರೀ ಶೆಟ್ಟಿ, ಎಂಜಿಎಂ ಕಾಲೇಜು ಉಡುಪಿ (ಪ್ರೋತ್ಸಾಹಕ ಪ್ರಶಸ್ತಿ)
ಸ್ನಾತಕೋತ್ತರ ವಿಭಾಗ: ಚೈತ್ರಾ, ಎಸ್‌ಡಿಎಂ ಕಾಲೇಜು ಉಜಿರೆ (ಪ್ರಥಮ), ಸ್ವಸ್ತಿಕ್ ಕನ್ಯಾಡಿ, ಎಸ್‌ಡಿಎಂ ಕಾಲೇಜು ಉಜಿರೆ (ದ್ವಿತೀಯ)
ಮಾಮ್ ಇನ್‌ಸ್ಪೈರ್ ಪ್ರಶಸ್ತಿ 2021- 22
ಪದವಿ ವಿಭಾಗ: ಶ್ಯಾಮ ಪ್ರಸಾದ್, ಎಸ್‌ಡಿಎಂ ಕಾಲೇಜು ಉಜಿರೆ (ಪ್ರಥಮ).
ಸ್ನಾತಕೋತ್ತರ ಪದವಿ ವಿಭಾಗ: ಇಂದೂಧರ ಹಳೆಯಂಗಡಿ, ಆಳ್ವಾಸ್ ಕಾಲೇಜು ಮೂಡಬಿದ್ರಿ (ಪ್ರಥಮ), ನಳಿನಿ ಆಳ್ವಾಸ್ ಕಾಲೇಜು ಮೂಡಬಿದ್ರಿ (ದ್ವಿತೀಯ)
ಪ್ರಶಸ್ತಿಗಳನ್ನು ಪ್ರಸಕ್ತ ವರ್ಷ ಮೇ ಅಂತ್ಯದೊಳಗೆ ಪ್ರದಾನ ಮಾಡಲಾಗುವುದು ಎಂದು ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ