ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಸಂಘದ ವತಿಯಿಂದ ಎಲ್ಎಸ್ಎಸ್, ಯುಎಸ್ಎಸ್ ತರಬೇತಿ ಹಾಗೂ ಮಾದರಿ ಪರೀಕ್ಷೆ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ ಅವರು ಉದ್ಘಾಟಿಸಿದರು. ಸಂಘಟನೆಯ ಉಪಜಿಲ್ಲಾ ಘಟಕದ ಉಪಾಧ್ಯಕ್ಷ ವೆಂಕಟರಾಜ ವಿ ಅಧ್ಯಕ್ಷತೆವಹಿಸಿದ್ದರು. ನವಜೀವನ ಪ್ರೌಢಶಾಲೆಯ ಹಿರಿಯ ಅಧ್ಯಾಪಕ ಹರೀಶ ಐ, ಸಂಘಟನೆಯ ಕೇಂದ್ರಸಮಿತಿಯ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶುಭ ಹಾರೈಸಿದರು.
ಡಾ.ಶ್ರೀಶ ಪಂಜಿತ್ತಡ್ಕ ಸ್ವಾಗತಿಸಿ, ನವಪ್ರಸಾದ್ ವಂದಿಸಿದರು. ಜ್ಯೋತ್ಸ್ನಾ ಕಡಂದೇಲು ಪ್ರಾರ್ಥಿಸಿದರು. ಸುಶೀಲ ಪದ್ಯಾಣ ನಿರೂಪಣೆ ಮಾಡಿದರು. ದಿನ ಪೂರ್ತಿ ತರಬೇತಿ ತರಗತಿಗಳನ್ನು ನಡೆಸಿ, ದಿನದ ಬಳಿಕ ಮಾದರಿ ಪರೀಕ್ಷೆ ನಡೆಸಲಾಯಿತು.
ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನಪಡೆದರು. ಎರಡೂ ದಿನವೂ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಘಟನೆಯ ಸದಸ್ಯ ಶಿಕ್ಷಕ ಶಿಕ್ಷಕಿಯರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಹಾಗೂ ಪರೀಕ್ಷೆಗಳನ್ನು ನಡೆಸಲು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ