ಆಶುಕವಿ ಪೊಟ್ಟಿಪ್ಪಿಲ ನಾರಾಯಣ ಭಟ್ ಅವರಿಗೆ ನುಡಿನಮನ, ಕಾವ್ಯ ಗಾಯನ

Upayuktha
0



ಕಾಸರಗೋಡು: ಗಡಿನಾಡ ಹಿರಿಯ ಕವಿ ಕನ್ನಡ ಪರ ಹೋರಾಟಗಾರ ಕೀರ್ತಿಶೇಷ ಆಶುಕವಿ ಪೊಟ್ಟಿಪ್ಪಲ ನಾರಾಯಣ ಭಟ್ ಅವರಿಗೆ ನುಡಿನಮನ ಕಾರ್ಯಕ್ರಮ ಸೋಮವಾರ (ಏ.10) ಪ್ರಕೃತಿ ಆಯುರ್ವೇದ ಆಸ್ಪತ್ರೆ ಚೂರಿಪ್ಪಳ್ಳ ನೆಲ್ಲಿಕ್ಕಟ್ಟೆಯ ಶ್ರೀಗಿರಿ ನಿವಾಸದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಕಾವ್ಯಪ್ರಸ್ಥಾನ, ನುಡಿನಮನ ಹಾಗೂ ಕಾವ್ಯ ಗಾಯನ ನಡೆಯಿತು.


ಡಾ. ವಾಣಿಶ್ರೀ ಕಾಸರಗೋಡು ಇವರ ಸಾರಥ್ಯದ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಈ ಕಾರ್ಯಕ್ರಮ ಆಯೋಜಿಸಿತ್ತು.


ಕಾರ್ಯಕ್ರಮದ ಮೊದಲಿಗೆ ಶ್ಯಾಮಲಾ ಸಂಪತ್ತಿಲ ಪ್ರಾರ್ಥನೆ ಮಾಡಿದರು. ಡಾ. ವಾಣಿಶ್ರೀ ಕಾಸರಗೋಡು ಸ್ವಾಗತಿಸಿದರು. ಗುರುರಾಜ್ ಎಂ ಆರ್ ಕಾಸರಗೋಡು ನಿರೂಪಣೆ ಹಾಗೂ ಧನ್ಯವಾದ ಸಮರ್ಪಣೆ ಮಾಡಿದರು. ಶಂಕರನಾರಾಯಣ ಭಟ್ ಸಂಪತ್ತಿಲ, ಈಶ್ವರ ಭಟ್ ಸಂಪತ್ತಿಲ, ಡಾ.ಶ್ಯಾಮ್ ಭಟ್ ಬೆಂಗಳೂರು, ಹಿರಿಯ ಕವಿ ಡಾ. ವಸಂತ ಕುಮಾರ್ ಪೆರ್ಲ, ನಿವೃತ್ತ ಪ್ರಾಧ್ಯಾಪಕರು ಕವಿವರ್ಯರೂ ಆದ ವಿ.ಬಿ ಕುಳಮರ್ವ, ಗೋವಿಂದ ಭಟ್, ಸೀತಾರಾಮ ಭಟ್ ಹಾಗೂ ಸರಸ್ವತಿ ಅಮ್ಮ ಏತಡ್ಕ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರೇಮಲತಾ ಎಡನೀರು, ಡಾ. ಸುರೇಶ್ ನೆಗಳಗುಳಿ, ಸುಶೀಲ ಪಿ ಭಟ್, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ನರಸಿಂಹ ಭಟ್ ಏತಡ್ಕ, ಕುಮಾರಿ ಪ್ರಣತಿ, ಕುಮಾರಿ ಪ್ರಣಮ್ಯ, ಶ್ರೀಮತಿ ಕವಿತಾ, ಬಾಲಕೃಷ್ಣ ಮೂರ್ತಿ ಕುಮಾರಮಂಗಲ, ಉಷಾ ಸುಧಾಕರನ್, ಹಾಗೂ ಎಲ್ಲಾ ಹಿರಿಯ, ಕಿರಿಯ ಕವಿ ಮಹಾಶಯರು, ಹಿತೈಷಿಗಳು, ಅಭಿಮಾನಿಗಳು, ಬಂಧು ಬಾಂಧವರು ಹಿರಿಯ ಆಶು ಕವಿಗೆ ಶ್ರದ್ದಾಂಜಲಿ ಅರ್ಪಿಸಿದರು.


ಈ ಸಂದರ್ಭದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಇವರು ಮಾತನಾಡುತ್ತಾ ಪೊಟ್ಟಿಪ್ಪಲ ನಾರಾಯಣ ಭಟ್ ರವರ ಬದುಕು ಲೋಕ ಅರಿಯಬೇಕು ಕಲಿಕಾ ವಿಷಯ ಆಗಲೇಬೇಕು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಮರೆಯಲಾರದ ಮಹಾನುಭಾವ ಹಾಗು ಸರಳ ಸಜ್ಜನಿಕೆಯ ವ್ಯಕ್ತಿ ನಾರಾಯಣ ಭಟ್ ರವರು ಎಂದು ಹೇಳಿದರು. ಭಾಗವಹಿಸಿದ ಎಲ್ಲಾ ಗಣ್ಯರಿಗೆ ಹಾಗೂ ಕವಿ ಮಹನೀಯರಿಗೆ ಸಂಸ್ಥೆಯ ಕೋಶಾಧಿಕಾರಿ ಡಾ ವೆಂಕಟ ಗಿರೀಶ ನೆನಪಿನ ಸ್ಮರಣಿಕೆ ನೀಡಿ ಗೌರವಿಸಿದರು.

ವರದಿ- ಗುರುರಾಜ್ ಕಾಸರಗೋಡು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top