ಪರಿಚಯ- "ಯಕ್ಷಪ್ರೇಮರಾಜ" - ಪ್ರೇಮ್ ರಾಜ್‌ ಕೊಯಿಲ

Upayuktha
0

 

ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಯಿಲದ ಜನಾರ್ಧನ ಹಾಗೂ ಜಾನಕಿ ಇವರ ಮಗನಾಗಿ 11.10.1988 ರಂದು ಪ್ರೇಮ್ ರಾಜ್‌  ಕೊಯಿಲ ಅವರ ಜನನ. ಕಂಪ್ಯೂಟರ್‌ ಡಿಪ್ಲೊಮಾ ಇವರ ವಿದ್ಯಾಭ್ಯಾಸ. ಹರಿಪ್ರಸಾದ್‌ ರಾವ್‌ ರಾಯಿ ಮತ್ತು ಅಕ್ಕ- ಅಣ್ಣಂದಿರು ಪ್ರೇಮ್ ರಾಜ್‌ ಕೊಯಿಲ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ದಿನೇಶ್‌ ಶೆಟ್ಟಿ ಕಾವಳಕಟ್ಟೆ, ದಿವಾಣ ಶಿವಶಂಕರ್‌ ಭಟ್‌ ಇವರ ಯಕ್ಷಗಾನದ ಗುರುಗಳು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-

ಪ್ರಸಂಗದ ಎಲ್ಲಾ ಪದ್ಯಗಳನ್ನು ಓದಿ ಅರ್ಥ ಮಾಡಿಕೊಂಡು ಹಿರಿಯರಲ್ಲಿ, ರಂಗದಲ್ಲಿ ಜತೆಯಾಗುವ ವೇಷದವರಲ್ಲಿ, ಭಾಗವತರಲ್ಲಿ ರಂಗ ನಡೆಯ ಬಗ್ಗೆ ಕೇಳಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಪ್ರೇಮ್ ರಾಜ್ ಅವರು ಹೇಳುತ್ತಾರೆ.


ಅತಿಕಾಯ ಮೋಕ್ಷ, ತಾಮ್ರಧ್ವಜ ಕಾಳಗ, ಬಬ್ರುವಾಹನ ಕಾಳಗ, ಲಲಿತೋಪಾಖ್ಯಾನ, ರಕ್ತರಾತ್ರಿ, ಗುರುದಕ್ಷಿಣೆ, ಲವ ಕುಶ ನೆಚ್ಚಿನ ಪ್ರಸಂಗಗಳು.

ಬಬ್ರುವಾಹನ, ಕೃಷ್ಣ, ವಿಷ್ಣು, ಅಭಿಮನ್ಯು, ಅಶ್ವತ್ಥಾಮ, ಚಂಡ ಮುಂಡರು, ಲವ - ಕುಶ, ರುಕ್ಮಾಂಗ - ಶುಭಾಂಗ‌ ಇವರ ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಹಿಂದಿನ ಯಕ್ಷಗಾನಕ್ಕೂ ಇಂದಿನ ಯಕ್ಷಗಾನಕ್ಕೂ ಹಲವಾರು ವ್ಯತ್ಯಾಸಗಳಿವೆ. ಕಾಲಕ್ಕೆ ತಕ್ಕಂತೆ ಬದಲಾಗ ಬೇಕಾದ ಅನಿವಾರ್ಯತೆ. ಯಕ್ಷಗಾನ ರಂಗಕ್ಕೆ ಪ್ರೇಕ್ಷಕರ ಕೊರತೆ ಇಲ್ಲ ಕಾಲಮಿತಿಯ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೇಕ್ಷಕರು ಬರಬಹುದು ಎಂಬುದು ಅನಿಸಿಕೆ.

ಕೆಲವು ಪ್ರೇಕ್ಷಕರು ಒಂದು ತಂಡಗಳ ಅಭಿಮಾನಿಗಳು, ಕೆಲವರು ನಿರ್ದಿಷ್ಟ ಕಲಾವಿದರ ಅಭಿಮಾನಿಗಳು, ಕೆಲವರು ವಿದೇಶದಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಯಕ್ಷಗಾನ ವೀಕ್ಷಿಸುವ ಪ್ರೇಕ್ಷಕರು. ಒಟ್ಟಾಗಿ ಯೋಚಿಸಿದರೆ ದೇಶ - ವಿದೇಶಗಳಲ್ಲಿ ಯಕ್ಷಗಾನ ತನ್ನ ಕಂಪನ್ನು ಹರಡುತ್ತಿದೆ.


ರಾಯಿ ಮಹಾಲಿಂಗೇಶ್ವರ ಭಜನಾ ಮಂಡಳಿ, ಬಂಟ್ವಾಳ 2013 ರಿಂದ ಹಾಗೂ 2002 ರಿಂದ ಯುವ ಭಾಗವತರಾದ ಧನಂಜಯ ಕೊಯಿಲ ಇವರ ನೇತೃತ್ವದಲ್ಲಿ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದಾರೆ.


ಸನ್ಮಾನ ಹಾಗೂ ಪ್ರಶಸ್ತಿಗಳು:-

♦ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಹಿರ್ಣಿ, ಅರಳ.

♦ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಕೈತ್ರೋಡಿ , ರಾಯಿ.

♦ ನಾಗಸುಬ್ರಮಣ್ಯೇಶ್ವರ ಬ್ರಹ್ಮಕಲಶೋತ್ಸವ ಸಮಿತಿ, ಬದನಡಿ.

♦ ಅತ್ತೂರು ಮೂಡ್ರಗುತ್ತು ಕುಟುಂಬಸ್ಥರು (ಅನ್ವೇಷ್‌ ಶೆಟ್ಟಿ).

♦ ರಾಯಿ ಮಹಾಲಿಂಗೇಶ್ವರ ಭಜನಾ ಮಂಡಳಿ.

♦ ಶಾರದೋತ್ಸವ ಸಮಿತಿ, ಕೊಯಿಲ.


1 ವರ್ಷ ಧರ್ಮಸ್ಥಳ ಮೇಳ, 5 ವರ್ಷ ಸಸಿಹಿತ್ಲು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ 11 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.


ಯಕ್ಷಗಾನ ರಂಗದಲ್ಲಿ ಅತೀ ಆತ್ಮೀಯರು ಹಾಗೂ ರಂಗದಲ್ಲಿ ಬೆಳೆಸಿದ ಭಾಗವತರಾದ ಬಲಿಪ ಪ್ರಸಾದ್‌ ಭಟ್ಟರ ಅಗಲುವಿಕೆ  ಯಕ್ಷಗಾನ ಜೀವನದಲ್ಲಿ ದುಃಖದ ದಿನ ಎಂದು ಹೇಳುತ್ತಾರೆ ಪ್ರೇಮ್ ರಾಜ್.


ಪ್ರೇಮ್ ರಾಜ್  ಅವರು ಶ್ರುತಿ ಅವರನ್ನು 10.05.2017 ರಂದು ಮದುವೆಯಾಗಿ ಮಗಳು ದಿಶಾನಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top