ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯು ಮೂರನೇ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಹತ್ತು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯು ಮೂರನೇ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಹತ್ತು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಬೆಂಗಳೂರಿನ ಮಹಾದೇವಪುರಕ್ಕೆ ಅರವಿಂದ ಲಿಂಬಾವಳಿ ಬದಲು ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಲಾಗಿದೆ.
ಯಾರಿಗೆಲ್ಲ ಟಿಕೆಟ್?
ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ನಾಗ್ಥನ್ ವಿಧಾನಸಭೆ ಕ್ಷೇತ್ರದಲ್ಲಿ ಸಂಜೀವ್ ಐಹೋಳೆ, ಸೇಡಂಗೆ ರಾಜ್‌ಕುಮಾರ್ ಪಾಟೀಲ್, ಕೊಪ್ಪಳದಲ್ಲಿ ಮಂಜುಳಾ ಅಮರೇಶ್‌ಗೆ ಟಿಕೆಟ್ ನೀಡಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸಿವಿ ಚಂದ್ರಶೇಖರ್ ಪ್ರಬಲ ಆಕಾಂಕ್ಷಿಯಾಗಿದ್ದರು.
ಇದೇ ರೀತಿ ರೋಣ ವಿಧಾನಸಭಾ ಕ್ಷೇತ್ರಕ್ಕೆ ಕಲಕಪ್ಪ ಬಂಡಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಲ್ಲಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲಾಗಿದೆ. ಹಗರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಎಸ್‌ಸಿ ಅಭ್ಯರ್ಥಿ ಬಿ ರಾಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.
ಹೆಬ್ಬಾಳದಲ್ಲಿ ಕಟ್ಟಾ ಜಗದೀಶ್, ಗೋವಿಂದರಾಜ ನಗರದಲ್ಲಿ ಉಮೇಶ್ ಶೆಟ್ಟಿಗೆ, ಮಹದೇವಪುರದಲ್ಲಿ ಮಂಜುಳಾ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಲಾಗಿದೆ. ಮೂರನೇ ಪಟ್ಟಿಯಲ್ಲಿ ಒಟ್ಟು ಹತ್ತು ಅಭ್ಯರ್ಥಿಗಳ ಹೆಸರಿದೆ.
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಲ್ಲಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲಿದ್ದಾರೆ. ಇವರು ಬಿಜೆಪಿಯ ಮಾಜಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಜಗದೀಶ್ ಶೆಟ್ಟರ್ ಜತೆಗೆ ಸ್ಪರ್ಧಿಸಬೇಕಿದೆ.
3 ದಶಕಕ್ಕೂ ಅಧಿಕ ಕಾಲ ಬಿಜೆಪಿಯಲ್ಲಿದ್ದ ಜಗದೀಶ್ ಶೆಟ್ಟರ್ ಅವರು ಇವತ್ತು ಆ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ಅವರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಮಹಾದೇವಪುರದಿಂದ ಲಿಂಬಾವಳಿ ಪತ್ನಿ ಮಂಜುಳಾಗೆ ಟಿಕೆಟ್ ಸಿಕ್ಕಿದರೆ , ಹೆಬ್ಬಾಳದಿಂದ ಕಟ್ಟಾ ಸುಬ್ರಹ್ಮಣ್ಯ ಬದಲು ಕಟ್ಟಾ ಉಮೇಶ್‌ಗೆ ಟಿಕೆಟ್ ಘೋಷಣೆಯಾಗಿದೆ. ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲಾಗಿದೆ.
ಸೋಮಣ್ಣ ಪ್ರತಿನಿಧಿಸುತ್ತಿದ್ದ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರಕ್ಕೆ ಉಮೇಶ್ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ. ಮಾನ್ವಿ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿಲ್ಲ.
ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದವರು:
ನಿಪ್ಪಾಣಿ- ಶಶಿಕಲಾ ಜೊಲ್ಲೆ, ಚಿಕ್ಕೋಡಿ - ರಮೇಶ್ ಕಟ್ಟಿ, ಅಥಣಿ - ಮಹೇಶ್ ಕುಮಟಳ್ಳಿ, ಕಾಗವಾಡ - ಬಾಳಸಾಹೇಬ್ ಪಾಟೀಲ್, ಕುಡಚಿ - ಪಿ ರಾಜೀವ್, ರಾಯಭಾಗ - ದುರ್ಯೋಧನ ಮಾಲಿಂಗಪ್ಪ, ಹುಕ್ಕೇರಿ - ನಿಖೀಲ್ ಕಟ್ಟಿ, ಹರಭಾವಿ - ಬಾಲಚಂದ್ರ ಜಾರಕಿಹೊಳಿ, ಗೋಕಾಕ್ - ರಮೇಶ್ ಜಾರಕಿಹೊಳಿ, ಯಮಕನಮರಡಿ - ಬಸವರಾಜ ಹುಂದ್ರಿ, ಬೆಳಗಾವಿ ಉತ್ತರ - ರವಿ ಪಾಟೀಲ್, ಬಳಗಾವಿ ದ - ಅಭಯ್ ಪಾಟೀಲ್, ಬೆಳಗಾವಿ ಗ್ರಾಮೀಣ - ನಾಗೇಶ್ ಮರೋಲ್ಕರ್, ಭದ್ರಾವತಿ- ಮಂಗೋಟೆ ರುದ್ರೇಶ್, ಸಾಗರ- ಹರತಾಳು ಹಾಲಪ್ಪ, ಶಿಕಾರಿಪುರ- ಬಿ.ವೈ.ವಿಜಯೇಂದ್ರ, ತೀರ್ಥಹಳ್ಳಿ- ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾ- ಅಶೋಕನಾಯ್ಕ್, ಸೊರಬ- ಕುಮಾರ ಬಂಗಾರಪ್ಪ ಸೇರಿದಂತೆ ಹಲವು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು.
ಬಿಜೆಪಿ ಎರಡನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು:
ದೇವರಹಿಪ್ಪರಗಿ - ಸೋಮನಗೌಡ ಪಾಟೀಲ್, ಬಸವನ ಬಾಗೇವಾಡಿ - ಎಸ್‌ಕೆ ಬೆಳ್ಳುಬ್ಬಿ, ಇಂಡಿ - ಕಾಸಾಗೌಡ ಬಿರಾದಾರ್, ಕರಮಿಟ್‌ಕಲ್ - ಲಲಿತಾ ಆನಾಪುರ, ಬೀದರ್ -ಈಶ್ವರ್ ಸಿಂಗ್ ಠಾಕೂರ್, ಬಾಲ್ಕಿ -ಪ್ರಕಾಶ್ ಖಂಡ್ರೆಗೆ ಟಿಕೆಟ್ ನೀಡಲಾಗಿದೆ.
ಗಂಗಾವತಿ - ಪರಣ್ಣ ಮುನ್ನಾವಾಲಿ, ಕಲಗಟಗಿ - ನಾಗರಾಜ್ ಚಬ್ಬಿ, ಹಾನಗಲ್ - ಶಿವರಾಜ್ ಸಜ್ಜನರ್, ಹಾವೇರಿ - ಗವಿಸಿದ್ಧಪ್ಪ ದ್ಯಾಮಣ್ಣನವರ್, ಹರಪನಹಳ್ಳಿ - ಕರುಣಾಕರ ರೆಡ್ಡಿ, ದಾವಣಗೆರೆ ಉತ್ತರ - ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷೀನ -ಅಜೇಯ್ ಕುಮಾರ್, ಮಾಯಕೊಂಡ - ಬಸವರಾಜ್ ನಾಯ್ಕ್, ಚನ್ನಗಿರಿ -ಶಿವಕುಮಾರ್, ಬೈಂದೂರ್ - ಗುರುರಾಜ್ ಗಂಟಿಹೊಳೆ, ಮೂಡಿಗೆರೆ -ದೀಪಕ್ ದೊಡ್ಡಯ್ಯ, ಗುಬ್ಬಿ -ದಿಲೀಪ್ ಕುಮಾರ್, ಶಿಡ್ಲಘಟ್ಟ - ರಾಮಚಂದ್ರಗೌಡ, ಕೆಜಿಎಫ್ - ಅಶ್ವಿನಿ ಸಂಪಂಗಿ, ಶ್ರವಣಬೆಳಗೊಳ -ಚಿದಾನಂದ, ಅರಸೀಕೆರೆ -ಜಿವಿ ಬಸವರಾಜ್, ಎಚ್‌ಡಿ ಕೋಟೆ - ಕೃಷ್ಣನಾಯ್ಕ್ ಸೇರಿದಂತೆ ಹಲವು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ