ಆರ್‌ಸಿಬಿ ಬೌಲಿಂಗ್ ಆಯ್ಕೆ; ಚಿನ್ನಸ್ವಾಮಿ ಮೈದಾನದಲ್ಲಿ ಕೆಂಪು-ಹಳದಿ ವೈಭವ
ಉಭಯ ತಂಡಗಳ ರೋಚಕ ಕದನಗಳಲ್ಲಿ ಈವರೆಗೆ ಸಿಎಸ್‌ಕೆ ತಂಡವೇ ಮೇಲುಗೈ ಸಾಧಿಸಿದೆ. ಈವರೆಗೆ ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದ್ದರೆ, ಸಿಎಸ್‌ಕೆ 19 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ನಡೆದ ಕೊನೆಯ ಮುಖಾಮುಖಿಯಲ್ಲಿ ಆರ್‌ಸಿಬಿ ಗೆದ್ದಿದೆ.
ಐಪಿಎಲ್‌ನಲ್ಲಿ ಅತಿ ರೋಚಕ ಪಂದ್ಯವೆಂದರೆ ಅದು ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಕದನ. ವೇಳಾಪಟ್ಟಿ ಪ್ರಕಟವಾದಂದಿನಿಂದ ಈ ದಿನಕ್ಕಾಗಿ ಅಭಿಮಾನಿಗಳು ಒಂಟಿ ಕಾಲಿನಲ್ಲಿ ಕಾಯುತ್ತಿರುತ್ತಾರೆ. ಆ ದಿನ ಕೊನೆಗೂ ಬಂದಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯುತ್ತಿದೆ.
ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡವು, ನಿರೀಕ್ಷೆಯಂತೆಯೇ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಕಣಕ್ಕಿಳಿಸಿದ ತಂಡವನ್ನೇ ಇಂದು ಕೂಡಾ ಕಣಕ್ಕಿಳಿಸಿದೆ. ಸಿಎಸ್‌ಕೆ ತಂಡದಲ್ಲಿ ಇಂದು ಮಗಾಲಾ ಬದಲಿಗೆ ಪತಿರಾನಾ ಕಣಕ್ಕಿಳಿಯುತ್ತಿದ್ದಾರೆ.
ಇಂದಿನ ಪಂದ್ಯದಲ್ಲಿ ಧೋನಿ ಹಾಗೂ ಕೊಹ್ಲಿ ವಿಶೇಷ ಆಕರ್ಷಣೆ. ಈವರೆಗೆ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಇಂದು 31ನೇ ಪಂದ್ಯವಾಗಿದ್ದು, ಇದು ಧೋನಿ ಹಾಗೂ ಹಾಗೂ ಕೊಹ್ಲಿ ನಡುವಿನ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಐಪಿಎಲ್ ಆವೃತ್ತಿಯ ಬಳಿಕ ಧೋನಿ ನಿವೃತ್ತಿ ಸಾಧ್ಯತೆ ಇದೆ. ಹೀಗಾಗಿ ಇಂದಿನ ಪಂದ್ಯ ವಿಶ್ವದ ಇಬ್ಬರು ಯಶಸ್ವಿ ನಾಯಕರ ನಡುವಿನ ಸ್ಪರ್ಧೆಯಾಗಿದೆ. ಇವರಿಬ್ಬರನ್ನು ಒಂದೇ ಮೈದಾನದಲ್ಲಿ ನೋಡುವುದು ಅಭಿಮಾನಿಗಳಿಗೆ ಒಂದು ರೀತಿಯ ಹೆಮ್ಮೆ.
ರೋಚಕ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಹಲವು ದಿನಗಳಿಂದ ಕಾಯುತ್ತಿದ್ದರು. ಹೀಗಾಗಿ ಈ ಪಂದ್ಯದ ಟಿಕೆಟ್ ವಾರಕ್ಕೂ ಮುಂಚೆಯೇ ಸೋಲ್ಡ್ ಔಟ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು - ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನವೇ ಐಪಿಎಲ್ನ ಮೋಸ್ಟ್ ಹೈವೋಲ್ಟೇಜ್ ಕದನ ಎಂದೇ ಬಿಂಬಿತವಾಗಿರುವ ಆರ್‌ಸಿಬಿ - ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಫೈಟ್ಗೆ ಟಿಕೆಟ್ಗಳು ಸಂಪೂರ್ಣ ಮಾರಾಟವಾಗಿವೆ. ಈ ಬಗ್ಗೆ ಆರ್ಸಿಬಿಯೇ ಅಧಿಕೃತ ಮಾಹಿತಿ ನೀಡಿದೆ. ಜನರ ಈ ಸ್ಪಂದನೆಯಿಂದಲೇ ಈ ಪಂದ್ಯ ಎಷ್ಟು ಮಹತ್ವ ಪಡೆದಿದೆ ಎಂಬುದು ಸಾಬೀತಾಗುತ್ತದೆ.
ಚಿನ್ನಸ್ವಾಮಿ ಮೈದಾನದಲ್ಲಿ 40 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇದ್ದು, ಎಲ್ಲಾ ಟಿಕೆಟ್ಗಳು ಮುಂಚಿತವಾಗಿಯೇ ಬುಕ್ ಆಗಿವೆ. ಎಂಎಸ್ ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್ ಎಂಬ ಮಾಹಿತಿ ಲಭ್ಯವಾದ ಕಾರಣ, ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ವಿರಾಟ್ ಕೊಹ್ಲಿ ಮತ್ತು ಧೋನಿ ಮುಖಾಮುಖಿಯೂ ಇದೇ ಕೊನೆಯಾಗಲಿದೆ. ಹಾಗಾಗಿ ಪಂದ್ಯದ ರೋಚಕತೆ ಹೆಚ್ಚಿದ್ದು, ಟಿಕೆಟ್ಗಳ ಬೇಡಿಕೆ ಹೆಚ್ಚಾಗಿದೆ.
ಪ್ರಸ್ತುತ ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಆರ್‌ಸಿಬಿ, ಸಿಎಸ್‌ಕೆಗಿಂತ ಒಂದು ಸ್ಥಾನ ಕೆಳಗಿದೆ. ತವರಿನಲ್ಲಿ ನಡೆದ ಕಳೆದ ಪಂದ್ಯವನ್ನು ಗೆದ್ದಿರುವ ತಂಡವು, ಚೆನ್ನೈ ವಿರುದ್ಧ ಮತ್ತೆ ಗೆಲ್ಲುವ ನಿರೀಕ್ಷೆಯಿದೆ.
ಉಭಯ ತಂಡಗಳ ರೋಚಕ ಕದನಗಳಲ್ಲಿ ಈವರೆಗೆ ಸಿಎಸ್‌ಕೆ ತಂಡವೇ ಮೇಲುಗೈ ಸಾಧಿಸಿದೆ. ಈವರೆಗೆ ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದ್ದರೆ, ಸಿಎಸ್‌ಕೆ 19 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ನಡೆದ ಕೊನೆಯ ಮುಖಾಮುಖಿಯಲ್ಲಿ ಆರ್‌ಸಿಬಿ ಗೆದ್ದಿದೆ. ಆದರೆ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸಿಎಸ್‌ಕೆ ತನ್ನದಾಗಿಸಿಕೊಂಡಿದೆ.
ಆರ್‌ಸಿಬಿ ಆಡುವ ಬಳಗ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಮಹಿಪಾಲ್ ಲೊಮ್ರರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್.
ಸಿಎಸ್‌ಕೆ ಆಡುವ ಬಳಗ
ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
...................................................................................
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ