ಕಾಲಚಕ್ರದೊಂದಿಗೆ ಬದಲಾಯಿತು ಬಾಂಧವ್ಯದ ಬೆಸುಗೆ

Upayuktha
0

ಸಾಂದರ್ಭಿಕ ಚಿತ್ರ


ಮ್ಮ ಜೀವನದಲ್ಲಿ ಅಕ್ಕರೆಯ ಬಾಂಧವ್ಯದ ಆ ಕೊಂಡಿಗಳನ್ನು ನೆನಪಿಸಿಕೊಂಡಾಗ ಮೊದಲಿಗೆ ಕಾಣುವುದು ಮನೆಯಲ್ಲಿನ ಹಿರಿಯರು ಅಂದರೆ ಅಜ್ಜ ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಆ ಸಂಬಂಧ. ಇವರುಗಳ ನಡುವಿನ ಆ ಮಮತೆ ಪ್ರೀತಿಯೇ ಹಾಗೆ, ಅದೆಷ್ಟೊ ಅವರ ಬದುಕಿನ ಬವಣೆಗಳನ್ನು ಅನುಭವದ ಸಾರಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ಸಮಾಧಾನ ಪಡುವಂತೆ ಕಾಣುತ್ತಾರೆ.


ಹಿರಿಯರು ಎಂದರೆ ಅವರೊಂದು ಅನುಭವಗಳ ಬತ್ತಳಿಕೆ. ಅವರ ಸಾಂಗತ್ಯದಿಂದ ಮಕ್ಕಳು ಕಲಿಯಬೇಕಾದದ್ದು ಎಷ್ಟೊಂದು ಇದೆ ಅಲ್ಲವೇ... ಹಿಂದಿನ ಕಾಲದ ಜೀವನ ಅವರ ಬಾಯಲ್ಲಿ ಕಥೆಯಾಗಿ ಹೊರಬರುತ್ತದೆ. ಎಳೆಯ ಮಕ್ಕಳು ಅದನ್ನು ಖುಷಿಯಿಂದ ಕುತೂಹಲದಿಂದ ಕೇಳುತ್ತಿದ್ದರೆ, ಕಾಲ ಕಳೆದಂತೆ ಅದೇ ಕಥೆಗಳು ಅದೆಷ್ಟೊ ನೀತಿಗಳನ್ನು ಹೇಳುತ್ತದೆ ಮೌಲ್ಯಗಳನ್ನು ಸಾರುತ್ತದೆ.


ಆದರೆ ಇಂದು ಕಾಲ ಬದಲಾಗಿದೆ ಅವರ ಮಾತುಗಳನ್ನು ಆಲಿಸಲು ನಮ್ಮಲ್ಲಿ ಸಮಯ ಇಲ್ಲದಂತಾಗಿದೆ. ಸಮಯವಿದ್ದರೂ ಅವರೊಂದಿಗೆ ಕಾಲ ಕಳೆಯಲು ನಮ್ಮ ಮನ ಇಷ್ಟ ಪಡದಂತಾಗಿದೆ. ಮೊಬೈಲ್ ನೊಂದಿಗೆ ಹೆಚ್ಚಾದ ನಂಟು, ವಿಭಕ್ತೀಯ ಕುಟುಂಬಗಳು ಹೀಗೆ ಕಾರಣ ಹಲವು ಇರಬಹುದು.


ತಮ್ಮ ಮೊಮ್ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳೆಯಲು ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಹಾತೊರೆಯುತ್ತಿರಬಹುದೇನೊ ಆ ಜೀವಗಳು. ಅವರಿಗೆ ಸಿಗುವ ಆ ಸಮಾಧಾನ ಹಾಗೆಯೇ, ಬದುಕಿನುದ್ದಕ್ಕೂ ನಮ್ಮೊಂದಿಗೆ ಉಳಿಯುವ ಆ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವೇ.


ಕಾಲ ಸರಿದಂತೆ ನಮಗೆ ಅಜ್ಜಿಯ ವಾತ್ಸಲ್ಯವಿಲ್ಲ, ಹಿರಿಯರ ಒಡನಾಟ ಇಲ್ಲದಂತಾಗುತ್ತಿರುವುದಂತೂ ಖಂಡಿತ. ಅವರ ಭಾವನೆಗಳಿಗೆ ಒಂದಿಷ್ಟು ಬೆಲೆ ಕೊಡಬೇಕಾಗಿದೆ... ಆಗ ಮಾತ್ರ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ. ನಮ್ಮ ಕುಟುಂಬದ ಹಿರಿಯರನ್ನು ಪ್ರೀತಿಯಿಂದ ಗೌರವಿಸಿ ಒಂದಿಷ್ಟು ದಯೆ ಮತ್ತು ಕೃತಜ್ಞತೆಯನ್ನು ಹೊಂದುವುದರಿಂದ ಮನೆಯ ಹಿರಿಯರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಇನ್ನಷ್ಟು ಮಧುರಗೊಳಿಸಬಹುದು.

   


- ಲತಾ ಚೆಂಡೆಡ್ಕ ಪಿ

ಪ್ರಥಮ ಬಿ.ಎ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top