ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಪ್ರಿಲ್ 4 ರಿಂದ 7ರವರೆಗೆ ಪ್ರತಿದಿನ ಸಂಜೆ (6 ರಿಂದ 8) ಧಾರ್ಮಿಕ/ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಏಪ್ರಿಲ್ 4, ಮಂಗಳವಾರ ಸಂಜೆ 6ಕ್ಕೆ: ರಾಜರಾಜೇಶ್ವರಿನಗರದ ಶ್ರೀ ಪೂರ್ಣಪ್ರಜ್ಞ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ.
ಏಪ್ರಿಲ್ 5, ಬುಧವಾರ ಸಂಜೆ 6ಕ್ಕೆ : ಉತ್ತರಹಳ್ಳಿಯ ಶ್ರೀವಾರಿಧಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ.
ಏಪ್ರಿಲ್ 6, ಗುರುವಾರ ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಪಿಟೀಲು: ಶ್ರೀಮತಿ ವಾಸುಕಿ ಪರಿಮಳ, ಮೃದಂಗ: ಮುರಳಿ ನಾರಾಯಣರಾವ್.
ಏಪ್ರಿಲ್ 7, ಶುಕ್ರವಾರ ಸಂಜೆ 6ಕ್ಕೆ: ವಿಶ್ವೇಶ್ವರಪುರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಗಳನ್ನು ಏರ್ಪಡಿಸಿದೆ ಎಂದು ಟಿಟಿಡಿ ಎಚ್ ಡಿ ಪಿ ಪಿ ಯ ಸಂಚಾಲಕರಾದ ಡಾ|| ಪಿ. ಭುಜಂಗ ರಾವ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ