ಏ.26 ರಿಂದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 'ಇನ್ಕ್ರೆಡಿಯಾ-2023'

Upayuktha
0



ನಿಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ನಾಲ್ಕು ದಿನಗಳ ಅಂತರ್‌ಕಾಲೇಜು ಮಟ್ಟದ ಟೆಕ್ನೋ-ಕಲ್ಚರಲ್ ಉತ್ಸವ 'ಇನ್ಕ್ರೆಡಿಯಾ-2023'ನ್ನು ಏ.26 ರಿಂದ 29ರವರೆಗೆ ನಿಟ್ಟೆ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದೆ. ಈ ಹಿಂದೆ ಟೆಕ್ನಿದರ್ಶನ್ ಎಂಬ ತಾಂತ್ರಿಕ ಉತ್ಸವ ಹಾಗೂ ಆನಂದೋತ್ಸವ ಎಂಬ ಸಾಂಸ್ಕೃತಿಕ ಉತ್ಸವಗಳೆರಡನ್ನೂ ನಡೆಸಲಾಗುತ್ತಿತ್ತು.


ಕಳೆದ 6 ವರ್ಷಗಳಿಂದ ಇವೆರಡನ್ನೂ ಒಟ್ಟುಗೂಡಿಸಿ ಒಂದೇ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಕರ್ಷಿಸಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಒಂದು ಅವಕಾಶ ಒದಗಿಸುವ ಮುಖ್ಯ ಉದ್ದೇಶದಿಂದ ಸಂಸ್ಥೆಯು 'ಇನ್ಕ್ರೆಡಿಯಾ' ಉತ್ಸವವನ್ನು ಆರಂಭಿಸಿತು. ದೇಶದ ವಿವಿಧ ರಾಜ್ಯಗಳ ಸುಮಾರು ೬೦ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಈ ಟೆಕ್ನೋ-ಕಲ್ಚರಲ್ ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.


ಈ ಅಂತರ್‌ಕಾಲೇಜು ಉತ್ಸವದ ಆರಂಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವವನ್ನೂ ಹಮ್ಮಿಕೊಳ್ಳಲಾಗಿದ್ದು ನವಮಂಗಳೂರು ಬಂದರಿನ ಚೇರ್ಮೆನ್ ಡಾ.ಎ.ವಿ ರಮಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಪ್ರಾಧ್ಯಾಪಕ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾಗೂ ಯಕ್ಷಗಾನ ಕಲಾವಿದ ಡಾ.ಪ್ರದೀಪ ವಿ. ಸಾಮಗ ಅವರು 'ಇನ್ಕ್ರೆಡಿಯಾ-2023' ನ್ನು ಏ.26 ರಂದು ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿರುವರು. ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.


ಈ ಇನ್ಕ್ರೆಡಿಯಾ ಉತ್ಸವದಲ್ಲಿ ರೋಡೀಸ್, ಟ್ಯಾಲೆಂಟ್ ಹೌಸ್, ಕ್ವಿಜ್, ರೋಬೋವಾರ್, ಫ್ಯಾಶನ್ ಶೋ, ಬ್ಯಾಟಲ್ ಆಫ್ ಬ್ಯಾಂಡ್ಸ್ ಸೇರಿದಂತೆ ಸುಮಾರು 60 ವಿವಿಧ ಬಗೆಯ ತಾಂತ್ರಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.


ಹೆಚ್ಚಿನ ವಿವರಗಳಿಗಾಗಿ ಭಾಗವಹಿಸಲಿಚ್ಛಿಸುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇನ್ಕ್ರೆಡಿಯಾ ಇನ್ಸ್ಟಾಗ್ರಾಮ್ ಪೇಜ್ ಅಥವಾ ಅಂತರ್ಜಾಲ ತಾಣ https://incridea.in/ ನ್ನು ಸಂದರ್ಶಿಸಬಹುದಾಗಿದೆ ಎಂದು ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top