ಉಜಿರೆ: ಪ್ರಸ್ತುತ ದಿನಗಳಲ್ಲಿ ಸಿ.ಎಸ್ ಕೋರ್ಸ್‍ಗಳಲ್ಲಿ ವಿಸ್ತ್ರುತ ಅವಕಾಶಗಳಿದ್ದು ಸ್ಪರ್ಧೆ ಕೂಡ ತೀವ್ರವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತೀವ್ರಗಮನ ಹರಿಸಿ ಸನ್ನದ್ದರಾಗಬೇಕೆಂದು ಉಡುಪಿಯ ಪರೀಕ್ಷಾ ಅಕಾಡೆಮಿಯ ಮುಖ್ಯಸ್ಥೆ ಸಿಎಸ್. ಅದಿತಿ ಪಂತ್ ಅವರು ಹೇಳಿದರು.
ದಿ. 12-04-2023 ರಂದು ಶ್ರೀ.ಧ.ಮಂ. ಕಾಲೇಜು (ಸ್ವಾಯತ್ತ), ಉಜಿರೆಯ ವಾಣಿಜ್ಯ ವಿಭಾಗವು ಏರ್ಪಡಿಸಿದ್ದ 'ದೃಶ್ಯಂ' ಅಂತರ್ ತರಗತಿ ಸ್ಪರ್ಧೆ ಹಾಗೂ ಸಿಎಸ್ ಕೋಚಿಂಗ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಇವರು, ಉಜಿರೆ ಕಾಲೇಜಿನಲ್ಲಿ ಸಿಎಸ್ ಕೋಚಿಂಗ್ ಏರ್ಪಡಿಸಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿಯ ಪರೀಕ್ಷಾ ಅಕಾಡೆಮಿಯ ಪ್ರೊ. ಸಾಹಿಲ್ ಶರ್ಮ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ.ಕುಮಾರ್ ಹೆಗ್ಡೆ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರತ್ನಾವತಿ ಕೆ ಅವರು ವೇದಿಕೆಯ ಮೇಲೆ ಉಪಸ್ತಿತರಿದ್ದರು.
ತೃತೀಯ ಬಿಕಾಂನ ಋತು ಇವರು ಸರ್ವರನ್ನು ಸ್ವಾಗತಿಸಿ, ದೀಕ್ಷಾ ಇವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ತೃತೀಯ ಬಿಕಾಂನ ಮಹಿಮಾ ಹೆಬ್ಬಾರ್ ಮತ್ತು ಶ್ರಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
'ದೃಶ್ಯಂ' ಅಂತರ್ ತರಗತಿ ಸ್ಪರ್ಧೆಯು ಏಳು ವಿಭಾಗಗಳನ್ನು ಒಳಗೊಂಡಿದ್ದು, ಹದಿಮೂರು ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದು, ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಜಿರೆ ಪಿಜಿ ಸ್ಟಡೀಸ್‍ನ ಡೀನ್ ಆದ ಡಾ. ವಿಶ್ವನಾಥ್.ಪಿ. ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಶಾಂತಿಪ್ರಕಾಶ್ ಇವರು ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು. ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, 'ದೃಶ್ಯಂ' ಅಂತರ್ ತರಗತಿ ಸ್ಪರ್ಧೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


