ಗಾಯನ ಲೋಕದ ಧ್ರುವತಾರೆ: ಶುಭದಾ ಆರ್ ಪ್ರಕಾಶ್

Upayuktha
0

 


ಪ್ತ ಸ್ವರಗಳು ಒಂದಾಗಿ ಸೇರಿದರೆ ಸುಮಧುರ ಸಂಗೀತ. ಶ್ರುತಿ ಲಯಕ್ಕೆ ಹೊಂದಿಕೆಯಾಗಬೇಕಾದರೆ ಕಿವಿಗೆ ಮಾಧುರ್ಯ. ಸಂಗೀತಾಭ್ಯಾಸ ಎನ್ನುವುದು ಅಷ್ಟು ಸುಲಭದ ಮಾತಲ್ಲ. ಎಲ್ಲರಿಗೂ ಒಲಿಯುವಂತಹ ಕಲೆಯೂ ಅಲ್ಲ. ಕಠಿಣ ಪರಿಶ್ರಮ, ನಿಷ್ಠೆ ಹಾಗೂ ನಿರಂತರ ಅಭ್ಯಾಸವೇ ತಮ್ಮ ಧ್ಯೇಯವನ್ನು ಸಾಧಿಸಲು ಅನುವು ಮಾಡುತ್ತದೆ.ಅಂತಹ ಸಾಧನೆಯ ಹಾದಿಯಲ್ಲಿ ಸಾಧಕರಾಗಿರುವುದು ಕರ್ನಾಟಕದ ಮನೆಮಗಳು ಶುಭದಾ ಆರ್ ಪ್ರಕಾಶ್.


ಶುಭದಾ ಆರ್ ಪ್ರಕಾಶ್ ರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ರವಿಪ್ರಕಾಶ್ ಸಿ ಪಿ ಮತ್ತು ಜಯಶ್ರೀ ಆರ್ ಪ್ರಕಾಶ್ ದಂಪತಿಯ ಪುತ್ರಿ. ಇವರು ಪ್ರಸ್ತುತ ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಪ್ರಥಮ ಬಿ ಬಿ ಎ ಅನ್ನು ವ್ಯಾಸಂಗ ಮಾಡುತಿದ್ದಾರೆ. ಇವರ ಸಹೋದರ ಶ್ರೀ ಪ್ರಸಾದ್ ಆರ್ ಪ್ರಕಾಶ್ ರವರು ಡ್ಯಾನ್ಸ್, ಭಜನೆ ಹಾಗೂ ಕೀಬೋರ್ಡ್ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಕಲೆ ಎಂಬುದು ಇವರಿಗೆ ಒಲಿದು ಬಂದಿರುವ ಸಂಪತ್ತು. ಇವರಿಗೆ ತಂದೆ ತಾಯಿಯ ನಿರಂತರ ಪ್ರೋತ್ಸಾಹವು ಸಾಧನೆಯ ಮೆಟ್ಟಿಲೇರಲು ಸುಲಭ ಮಾಡಿದೆ. ಇವರು ತಮ್ಮ ಎಳವೆಯಿಂದಲೇ ತನ್ನ ಹಾಡುಗಾರಿಕೆಯನ್ನು ಪ್ರಾರಂಭಿಸಿದರು. ಇವರು ಚಿಕ್ಕ ವಯಸ್ಸಿನಲ್ಲಿ ಸ್ಪರ್ಧೆಗೆಂದು ಶಾಲೆಯಲ್ಲಿ ಹಾಡುವಾಗ ಅಲ್ಲಿಯ ಒಬ್ಬ ಶಿಕ್ಷಕರು ಇವರ ಹಾಡಿನ ಸ್ವರಕ್ಕೆ ಮಾರುಹೋಗಿ "ಇವಳನ್ನು ಸಂಗೀತ ಶಾಲೆಗೆ ಸೇರಿಸಿ "ಎಂದು  ಇವರ ತಂದೆ –ತಾಯಿಯ ಬಳಿ ಹೇಳುತ್ತಾರೆ. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬಂತೆ ಇವರ ಬಾಲ್ಯದಲ್ಲಿನ ಪ್ರತಿಭೆಗೆ ತಂದೆ ತಾಯಿಯ ಪ್ರೋತ್ಸಾಹ ದೊರಕಿತು. ಅಂದು ಇವರು ತಮ್ಮ ಬಾಲ್ಯದಲ್ಲಿಯೇ ಕೆ ಆರ್ ಜಿ ಗೋಪಾಲಕೃಷ್ಣರವರ ಬಳಿ ಸಂಗೀತಾಭ್ಯಾಸಕ್ಕೆಂದು ಸೇರುವರು. ಇವರ ಛಲಗಾರಿಕೆ ಮತ್ತು ಚುರುಕುತನ ಕಂಡು ಗೋಪಾಲಕೃಷ್ಣರವರು ಶಾಸ್ತ್ರೀಯ ಸಂಗೀತಾಭ್ಯಾಸಕ್ಕೆ ಸೇರಿಸಿ ಎಂದು ಹೇಳುತ್ತಾರೆ. ಪ್ರತಿಯೊಬ್ಬ ಮಗುವು ತನ್ನ ಬಾಲ್ಯವನ್ನು ಆಟ, ಹರಟೆಯೊಂದಿಗೆ ಕಳೆದರೆ ಶುಭದಾರವರು ತಮ್ಮ ಬಾಲ್ಯವನ್ನು ಸಂಗೀತದೊಂದಿಗೆ ಆಡುತ್ತಾ, ನಡೆಯುತ್ತಾ ಕಳೆದರು.


 ಬಹುಮುಖ ಪ್ರತಿಭಾವಂತೆಯಾಗಿರುವ ಶುಭದಾರವರು ತನ್ನನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಇವರು ವಿದ್ವಾನ್ ಶ್ರೀ ಕಾಂಚನ ಈಶ್ವರಭಟ್ ಬಳಿ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರನ್ನು ಪೂರ್ಣಗೊಳಿಸಿದ್ದಾರೆ. ಹಾಗೆಯೇ ವಿದೂಶಿ ವಿದ್ಯಾಶ್ರೀ ರಾಧಾಕೃಷ್ಣನ್ ಬಳಿ ಭರತನಾಟ್ಯದಲ್ಲಿ ಜೂನಿಯರನ್ನು ಪೂರ್ಣಗೊಳಿಸಿದ್ದಾರೆ ಮತ್ತು ಚಿತ್ರಕಲೆ ಕಲಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಹಾಗೂ ಪ್ರಸ್ತುತ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.


ಇವರ ಜೀವನದಲ್ಲಿ ಎಂದಿಗೂ ಮರೆಯದ ಸಂಗತಿಯೆಂದರೆ ಅದು "ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ಸ್ ಚಾಂಪ್ಸ್ ಸೀಸನ್ 16". 2019 ರಲ್ಲಿ ಒದಗಿ ಬಂದ ರಿಯಾಲಿಟಿ ಶೋ ಅವಕಾಶ ಶುಭದಾರವರ ಜೀವನದ ತಿರುವಿಗೆ ಕಾರಣವಾಯಿತು. ಇವರ ಗಾಯನ ಪಯಣದ ಮೆಟ್ಟಿಲೇ ಸರಿಗಮಪ ರಿಯಾಲಿಟಿ ಶೋ. ಶುಭದಾರವರು ಎಂದಿಗೂ ನೆನೆಯುವರು "ನನ್ನ ಸಂಗೀತ ಪಯಣಕ್ಕೆ ಸರಿಗಮಪವೇ ಆಧಾರಸ್ತಂಭ" ಎಂದು.ಇವರು ಮೊದಲು "ಸಾವಿರದ ಶರಣವ್ವ" ಎಂದು ಹಾಡುವ ಮೂಲಕ ತಮ್ಮ ಕಂಚಿನ ಕಂಠದಿಂದ ಇಡೀ ಕರ್ನಾಟಕದ ಜನತೆಯನ್ನು ಸೆಳೆದರು. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿನ ತೀರ್ಪುಗಾರರಿಂದ "ಜ್ಯೂನಿಯರ್ ಬಿ. ಜಯಶ್ರೀ" ಎಂಬ ಪ್ರಶಂಸೆಗೆ ಪಾತ್ರರಾದರು. ಶುಭದಾರವರು ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಮನೆ ಮಗಳಲ್ಲ, ಇಡೀ ಕರ್ನಾಟಕದ ಜನತೆಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಭದಾರವರು ಸರಿಗಮಪದಿಂದ ಎಲಿಮಿನೇಟ್ ಆದ ದಿನ ಮನಸ್ಸಾರೆ ಅತ್ತುಬಿಟ್ಟರು. ಆದರೆ ಅವರು ತನ್ನ ಸಂಗೀತ ಇಲ್ಲಿಗೆ ಕೊನೆ ಎಂದು ಕೂರಲಿಲ್ಲ. "ಸೋಲೇ ಗೆಲುವಿನ ಮೆಟ್ಟಿಲು" ಎಂಬಂತೆ ತಮ್ಮ ಸಂಗೀತ ಪಯಣವನ್ನು ಮರು ಪ್ರಾರಂಭಿಸಿದರು. ಇಂದಿಗೂ ಎಂದಿಗೂ ಕೊನೆಯಿಲ್ಲ ಅವರ ಸಂಗೀತ ಪಯಣಕ್ಕೆ ಸಂಗೀತವು ಅವರಿಗೆ ಒದಗಿ ಬಂದಿರುವ ಕಲಾದೇವತೆ ಇದ್ದಂತೆ. ಹನ್ನೊಂದು ವರ್ಷದ ಸಂಗೀತ ಪಯಣ ಇವರದು. ಇವರ ದ್ಯೇಯ ಒಂದೇ ಅದು "ಭಾರತದ ಪ್ರಖ್ಯಾತಿ ಗಾಯಕಿಯಾಗಬೇಕು" ಎನ್ನುವುದು.


ಶುಭದಾರವರು ಕನ್ನಡ ಕಲಾ ಪ್ರತಿಭೋತ್ಸವ ನೆನಪಿನಲ್ಲಿ ರಾಜ್ಯಪುರಸ್ಕಾರ, ಸ್ವರ ಮಂದಾರ ರಾಜ್ಯ ಪುರಸ್ಕಾರ, ಗಡಿನಾಡು ಧ್ವನಿ ಕಲಾಭೂಷಣ ರಾಜ್ಯ ಪ್ರಶಸ್ತಿ, ಜೆ. ಸಿ. ಐ ಕಲಾಶ್ರೀ ಪ್ರಶಸ್ತಿ, ರೋಟರಿ ಬಾಲ ಪ್ರಶಸ್ತಿ ಪುರಸ್ಕಾರ, 2021ರ ಸ್ವರ ಮಂದಾರ ರಾಜ್ಯ ಪ್ರಶಸ್ತಿ ಮತ್ತು ಜ್ಞಾನ ಮಂದಾರ ಬೆಂಗಳೂರು, ಅರಳು ಮಲ್ಲಿಗೆ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರ ಸಾಧನೆಯ ಕೀರ್ತಿಗೆ ಸಾಕ್ಷಿ ಎಂಬಂತೆ "2021 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ " ಗೆ ಆಯ್ಕೆಯಾದರು.


ಗಾನಕೋಗಿಲೆಯಾದ ಶುಭದಾ ಆರ್. ಪ್ರಕಾಶರವರು ಸಪ್ತ ಭಾಷೆಗಳಲ್ಲಿ ಹಾಡುವ ಬಹುಮುಖ ಪ್ರತಿಭಾವಂತೆ. ಇವರು ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಹಾಡುವ ಸಪ್ತ ಭಾಷೆಗಳ ಅಪ್ರತಿಮ ಪ್ರತಿಭೆ. ಸಾಧಕರ ಪಟ್ಟಿಯಲ್ಲಿ ಶುಭದಾರವರೂ ಒಬ್ಬರು. ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೆಲ್ಲಾ  ಸಾಧನೆಗೈದರೂ ಸಹ ಇವರಿಗೆ ಸ್ವಲ್ಪವೂ ಅಹಂಕಾರವಿಲ್ಲದೆ ನಡೆಯುವರು. ತೊರೆಯುವರು ನಾನೊಬ್ಬ ಸೆಲೆಬ್ರೆಟಿ ಎಂಬುದನ್ನು, ಇರುವರು ಸದಾ ನಗುತ್ತಾ ನಾನು ನಿಮ್ಮವರಲ್ಲಿ ಒಬ್ಬಳು ಎಂದು.


ಶುಭದಾರವರ ಕಂಠಸಿರಿಯನ್ನು ಸವಿದವರು ಮತ್ತೇ ಮತ್ತೇ ಗಾನ ಕೋಗಿಲೆಯ ಸ್ವರವನ್ನು ಕೇಳಬೇಕು ಎನ್ನುತ್ತಾರೆ. ತನ್ನ ಹಾಡುಗಳನ್ನು ಹಾಡುವ ಮೂಲಕ ಜನತೆಯ ಮೈಮನ ತಣಿಸಿದ ಗಾಯ ಲೋಕದ ಸುಂದರಿ, ನಮ್ಮ ಸುಳ್ಯದ ಗಾಯನ ಪ್ರತಿಭೆ. ಆದರೆ ನಮ್ಮೆಲ್ಲರ ಮೆಚ್ಚಿನ ಶುಭದಾ ಎಂಬ ಅಪ್ರತಿಮ ಪ್ರತಿಭೆ. ಆಶಿಸುವೆನು, "ನಿಮ್ಮ ಕಂಠ ಸ್ವರವು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ಕಂಪಿಸಲಿ ". ಸಂಗೀತವೆಂಬ ಸಾಗರದ ಮೀನುಗು ತಾರೆ ನಮ್ಮ ಈ ಸುಳ್ಯದ ಗಾನಕೋಗಿಲೆ ಶುಭದಾ ಆರ್. ಪ್ರಕಾಶ್.


-ಕೀರ್ತನ ಒಕ್ಕಲಿಗ ಬೆಂಬಳೂರು.                       

ವಿವೇಕಾನಂದ ಕಾಲೇಜು ಪುತ್ತೂರು.      

                                                                                                                                                              


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top