ಗೋವಿಂದ ದಾಸ ಕಾಲೇಜಿನಲ್ಲಿ ವಿದ್ಯಾರ್ಥಿ ಸಾಧಕರಿಗೆ ಅಭಿನಂದನೆ, ನಿವೃತ್ತರಿಗೆ ಸಮ್ಮಾನ

Upayuktha
0

 


ಮಂಗಳೂರು: ವಿದ್ಯಾರ್ಥಿಗಳು ಆತ್ಮವಿಶ್ವಾಸದ ಮನೋಭಾವವನ್ನು ಬೆಳೆಸಿ ಕೌಶಲವಂತರಾಗಿ ಬದುಕಿನಲ್ಲಿ ಉನ್ನತಿಗೇರಬೇಕೆಂದು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೊಸಬೆಟ್ಟು ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ಸಾಧಕರಿಗೆ ಅಭಿನಂದನೆ ಹಾಗೂ ನಿವೃತ ಸಿಬ್ಬಂದಿಗಳಿಗೆ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಸಂಪನ್ಮೂಲ ವ್ಯಕ್ತಿ ಮನೋಶಾಸ್ತ್ರಜ್ಞ ಡಾ.ಮನು ಆನಂದ ಅವರು ಹದಿಹರೆಯದವರ ಮಾನಸಿಕ ಆರೋಗ್ಯ ಹಾಗೂ ಅವರ ಪೋಷಣೆ ಯ ಕುರಿತು ಮಾತನಾಡಿ ಮಕ್ಕಳ ಮನೋಭಾವದ ಕುರಿತು ಪೋಷಕರು ಸೂಕ್ಷ್ಮಜ್ಞರಾಗಿ ಇರಬೇಕೆಂದರು.


ಡಾಕ್ಟರೇಟ್ ಪದವಿ ಪಡೆದ ಪ್ರಾಧ್ಯಾಪಕ ಡಾ.ಗಣೇಶ ಆಚಾರ್ಯರನ್ನು ಸಮ್ಮಾನಿಸಲಾಯಿತು. ಸೇವಾ ನಿವೃತ್ತರಾದ ಆಡಳಿತಾತ್ಮಕ ಸಿಬ್ಬಂದಿಗಳಾದ ಚಂದ್ರಶೇಖರ್ ಕಬ್ಬಿನ ಹಿತ್ಲು ಹಾಗೂ ಬಸವ ಅವರನ್ನು ಗೌರವಿಸಲಾಯಿತು. ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಜನಪದ ಆಕೇಸ್ಟ್ರಾದಲ್ಲಿ ದ್ವಿತೀಯ ಸ್ಥಾನ ಪಡೆದು ಅಂತರ್‍ರಾಷ್ಟ್ರೀಯಮಟ್ಟದ ಯುವಜನೋತ್ಸಕ್ಕೆ ಆಯ್ಕೆಯಾಗಿರುವ ಕಾಲೇಜಿನ ತಂಡದ ಸದಸ್ಯರನ್ನು ಹಾಗೂ ಸಂಯೋಜಕ ವಿನೋದ್ ಕುಮಾರ್ ಕೃಷ್ಣಾಪುರ ಹಾಗೂ ಪ್ರಾಧ್ಯಾಪಕಿ ಪುನೀತಾ ಅವರನ್ನು ಅಭಿನಂದಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ಯುವರೆಡ್‍ಕ್ರಾಸ್ ಸ್ವಯಂ ಸೇವಕ ಪ್ರಶಸ್ತಿ ಪಡೆದಿರುವ ವರುಣ್.ಹೆಚ್.ಕಾಂಚನ್, ಅತ್ಯುತ್ತಮ ರಾಷ್ಟ್ರೀಯ ಸೇವಾಯೋಜನಾ ಸ್ವಯಂ ಸೇವಕಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ರಶ್ಮಿ.ಜೆ.ಅಂಚನ್, ಎಂ.ಕಾಂ. ನಲ್ಲಿ ಆರನೇ ರ್ಯಾಂಕ್ ಪಡೆದಿರುವ ಸೂರಜ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಐದು ಮಂದಿ ವಿದ್ಯಾರ್ಥಿಗಳಿಗೆ ಶ್ರೀಕಾಂತ್ ಶೆಟ್ಟಿ ಬಾಳ ವಿದ್ಯಾರ್ಥಿವೇತನವನ್ನು ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕಶಿಕ್ಷಕ ಸಂಘದ ಅಧ್ಯಕ್ಷ ಯಾದವ ದೇವಾಡಿಗ ವಹಿಸಿದ್ದರು.

ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ.ಹರೀಶ್ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಗೀತಾ.ಕೆ ವರದಿ ಮಂಡಿಸಿದರು, ಜೊತೆ ಕಾರ್ಯದರ್ಶಿ ಶೈಲಜಾ ಹೆಚ್ ಪ್ರಶಸ್ತಿ ಪುರಸ್ಕೃತರ ವಿವರಗಳನ್ನಿತ್ತರು. ರಕ್ಷಕಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಮಿತ್ರ, ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಎಸ್ ಜಿ, ರಕ್ಷಕಶಿಕ್ಷಕಸಂಘದ ಸದಸ್ಯರಾದ ಪ್ರೊ.ನೀಲಪ್ಪ ವಿ, ಪ್ರೊ.ವಾಮನ್ ಕಾಮತ್, ಧರ್ಮರಾಜ್, ಪೂರ್ವಾಧ್ಯಕ್ಷರಾದ ಲೀಲಾಧರ ಶೆಟ್ಟಿ, ಗಂಗಾಧರ ಪೂಜಾರಿ, ಬಿ.ನಾರಾಯಣ ಗೌಡ, ಮಾಧವ ಕೋಟ್ಯಾನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top