ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 2, ಮಂಗಳವಾರ ಸಂಜೆ 5-30ಕ್ಕೆ ದೊಡ್ಡಕಲ್ಲಸಂದ್ರದ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಂತರ ಡಾ.ಜಗನ್ನಾಥಾಚಾರ್ ರಿಂದ ಧಾರ್ಮಿಕ ಉಪನ್ಯಾಸ, ಮೇ 3, ಬುಧವಾರ ಸಂಜೆ 5-30ಕ್ಕೆ ಜಯನಗರದ ಪರಿಮಳ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಂತರ ಡಾ. ಜಗನ್ನಾಥಾಚಾರ್ ರಿಂದ ಧಾರ್ಮಿಕ ಉಪನ್ಯಾಸ, ಮೇ 4, ಗುರುವಾರ ಸಂಜೆ 4-30ಕ್ಕೆ ಇಟ್ಟುಮಡುವಿನ ಶ್ರೀ ಹಯವದನ ವಾದಿರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಂತರ ಡಾ. ಜಗನ್ನಾಥಾಚಾರ್ ರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ.ಯ ಸಂಚಾಲಕರಾದ ಡಾ. ಪಿ. ಭುಜಂಗರಾವ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ