ಕರ್ನಾಟಕ ಕಲಾದರ್ಶಿನಿ ತಂಡದಿಂದ ಯಕ್ಷಗಾನ ಬೇಸಿಗೆ ಶಿಬಿರ-2023 ಸಮಾರೋಪ

Upayuktha
0

ಬೆಂಗಳೂರು: ಬೆಂಗಳೂರಿನ ಗಿರಿನಗರದ ಶ್ರೀ ಮಹಾಗಣಪತಿ ದೇವಾಲಯ ಸಭಾಂಗಣದಲ್ಲಿ ನೆರವೇರಿತು. ಯಕ್ಷಗಾನ ಪೂರ್ವರಂಗ,‌ ಸಂಗೀತ ತರಬೇತಿಯನ್ನು ಯಕ್ಷಗುರು ಶ್ರೀನಿವಾಸ ಸಾಸ್ತಾನ‌, ಗೌತಮ್‌ ಸಾಸ್ತಾನ ಮತ್ತು ಡಾ. ಸುಪ್ರೀತ ನಡೆಸಿಕೊಟ್ಟರು.


ಬಳಿಕ ಶ್ರೀನಿವಾಸ ಸಾಸ್ತಾನ ಅವರ‌ ಮಾರ್ಗದರ್ಶನದಲ್ಲಿ ತಂಡದ‌ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ ಕಾಳಗ ಮತ್ತು ಶಿಬಿರಾರ್ಥಿ ಪುಟಾಣಿಗಳಿಂದ 'ವೀರ‌ ಅಭಿಮನ್ಯು' ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಾಯಿತು.


ಶನಿವಾರ (15/4/2022) ನಡೆದ ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ದೀಕ್ಷಾಭಟ್, ಆದರ್ಶ ಶೆಟ್ಟಿ, ಶ್ರೀಹರಿ ಸರಳಾಯ, ಸುಧನ್ವ ಭಟ್, ಧೃತಿ ಅಮ್ಮೆಂಬಳ, ಶ್ರೇಯಸ್ ಸರಳಾಯ, ರಘುವೀರ ಪಾಂಗಣ್ಣಾಯ, ಅಭಿಶ್ರೀ‌‌ ವಿವಿಧ ಪಾತ್ರಗಳಲ್ಲಿ ರಂಜಿಸಿದರು.


ಮರುದಿನ ನಡೆದ ಶಿಬಿರಾರ್ಥಿ ಪುಟಾಣಿಗಳು ನಡೆಸಿಕೊಟ್ಟ ವೀರ‌‌ ಅಭಿಮನ್ಯು ಯಕ್ಷಗಾನದಲ್ಲಿ ಸೃಷ್ಟಿ ಚೇತನ್ ಜಯಂತ, ಆಯುಷ್ ಎಸ್, ಸಾಯಿ ಪ್ರಣಾಮ್, ಕೃಷ್ಣ‌ ಭಟ್, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠಾ ಚೇತನ್ ಜಯಂತ, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಅಭಿಶ್ರೀ ಶ್ರೀಹರ್ಷ ಭಟ್ಟ, ಧನುಶ್ ಶೆಟ್ಟಿ, ಸಮನ್ವಿತ, ಯಶ್ವಿತಾ, ಶ್ರೀಯಾ, ಯಾದವಿ, ಅಗಸ್ತ್ಯ, ಧನ್ವಿನ್, ವಿಶ್ರುತ್, ಧೃತಿ ಅಮ್ಮೆಂಬಳ  ಬಾಲಕಲಾವಿದರಾಗಿ ಮಿಂಚಿದರು.


ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ್‌ ಬಾಳೆಕುದ್ರು, ಚೆಂಡೆಯಲ್ಲಿ‌ ಸಬ್ರಹ್ಮಣ್ಯ ಸಾಸ್ತಾನ, ಮದ್ದಲೆಯಲ್ಲಿ‌ ರಾಘವೇಂದ್ರ ಬಿಡುವಾಳ ಭಾಗವಹಿಸಿದ್ದರು. ಚೈತ್ರಾ ಕೋಟಾ‌ ಅವರು ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top