ಪುತ್ತೂರು: ಸಾಹಿತ್ಯ ಎಂಬುವುದು ಎಲ್ಲರದಲ್ಲ ಎಂದು ನಾವು ಅದನ್ನು ಅಪ್ಪಿಕೊಳ್ಳಬೇಕು, ಹಾಗೆಯೇ ನಮ್ಮದು ಎಂದು ಒಪ್ಪಿಕೊಳ್ಳಬೇಕು. ಅದೆಷ್ಟೋ ಏರು ಪೇರುಗಳನ್ನು ಎದುರಿಸಿದರು, ಮನಸ್ಸು ಮುದುಡಿಹೋದರೂ, ಜೀವನವೇ ಬೇಡ ಎಂದು ನಿರ್ಧಾರವಾದರೂ ನಾವು ನಮ್ಮ ಮನಸನ್ನು ಗಟ್ಟಿಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಹಾಗೂ ವಿದ್ವಾಂಸ ಪ್ರೊ. ವಿ ಬಿ ಅರ್ತಿಕಜೆ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ವಿವೇಕಾನಂದ ಸಂಶೋಧನ ಕೇಂದ್ರ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಘ ಇದರ ಸಹಯೋಗದಲ್ಲಿ ನಡೆದ ನಿರಂಜನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಮಾತನಾಡಿ ಮಾನವ ಸಂಬಂಧ ರೂಪಿಸಿಕೊಳ್ಳುವ ಬಗ್ಗೆ ಮತ್ತು ಸಮಾಜದಲ್ಲಿ ಬದುಕುವುದು ಹೇಗೆ ಎಂದು ತಿಳಿಸಿಕೊಟ್ಟರು.
ಕಥೆಗಳನ್ನು ಹುಡುಕಿ, ಆರಿಸಿ ಆ ಕಾಲಕ್ಕೆ ಯಾವ ಕಥೆಗಳು ಹೆಚ್ಚು ಪ್ರಸ್ತುತ ಮತ್ತು ಯಾವುದರಲ್ಲಿ ಆಧುನಿಕವಾದಂತಹ ಪ್ರಗತಿಶೀಲವಾದಂತಹ, ಪ್ರಗತಿಪರವಾದಂತಹ ಚಿಂತನೆಗಳು ಮಹಿಳೆಯರ ಬಗ್ಗೆ ಇದೆ. ಹಾಗೆಯೇ ಇರುವುದನ್ನು ಆಲೋಚನೆ ಮಾಡಿ ಅದನ್ನು ಆರಿಸಿ ಪ್ರಕಟ ಮಾಡಿದೆವು ಎಂದು ಅತಿಥಿ ಸ್ಥಾನವನ್ನು ವಹಿಸಿದ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್ ಜಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ ಪ್ರೊ ವಿ.ಬಿ ಅರ್ತಿಕಜೆಯವರು ಗಂಗಾ ಪಾದೇಕಲ್‍ರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರುಳಿ ಕೃಷ್ಣ ಕೆ ಎನ್ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ ವಂದಿಸಿ, ಕನ್ನಡ ವಿಭಾಗದ ಸಹ ಶಿಕ್ಷಕಿ ಡಾ.ಮೈತ್ರಿ ಭಟ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ