ಅಂಬೇಡ್ಕರ್ ಜಯಂತಿ: ಹಾಸನಾಂಬ ಕಲಾಕ್ಷೇತ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ

Upayuktha
0



ಹಾಸನ: ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ, ಹಾಗೂ ಶ್ರೀ ಶಾರದಾ ಕಲಾಸಂಘ (ರಿ) ವಿಜಯನಗರ ಬಡಾವಣೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಏ.16 ರ ಭಾನುವಾರ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.


ಬೆಳಗ್ಗೆ 9 ಕ್ಕೆ ಅಂಗೈಲಿ ಅಕ್ಷರ ಮಕ್ಕಳ ಚಲನಚಿತ್ರ ಪ್ರದರ್ಶನ, ನಂತರ ಶ್ರೀಮತಿ ಕಲಾವತಿ ಮಧಸೂಧನ್ ಇವರಿಂದ ವೀಣಾವಾದನ, ಭಾವಗೀತೆ, ಪುಟ್ಟಮ್ಮ ತಂಡದವರಿಂದ ಸೋಬಾನೆ ಪದಗಳು, ಯೋಗೇಂದ್ರ ದುದ್ದ ತತ್ವಪದಗಳು, ಬೆನಕ ತಂಡ ಕೋಲಾಟ, ಚನ್ನರಾಯಪಟ್ಟಣ ಶೈಲಜಾ ತಂಡ ನೃತ್ಯ ರೂಪಕ, ಶಾರದ ಕಲಾ ತಂಡ ಸುಗಮ ಸಂಗೀತ, ಎ.ಸಿ.ರಾಜು ರಂಗ ಗೀತೆಗಳು, ನಂಜನಗೂಡು ಸೋಮರಾಜ್ ಜಾನಪದ ಗೀತೆ, ಸಾವಿತ್ರಮ್ಮ ತಂಡ ಜಾನಪದ ನೃತ್ಯ, ಬೆಂಗಳೂರಿನ ಹಾಸ್ಯ ಸಾಹಿತಿ ಎಸ್.ಎಸ್.ಪಡಶೆಟ್ಟಿ ಇವರಿಂದ ಹಾಸ್ಯ ರಸಾಯನ, ಗ್ಯಾರಂಟಿ ರಾಮಣ್ಣ ತಂಡದಿಂದ ಬಾಡಿದ ಬದುಕು ಕೌಟುಂಬಿಕ ನಾಟಕ, ಪ್ರಸನ್ನ ತಂಡದಿಂದ ಪೊಲೀಸರಿದ್ದಾರೆ ಎಚ್ಚರಿಕೆ ಸಾಮಾಜಿಕ ನಾಟಕ ಹಾಗೂ ಕಟ್ಟಾಯ ಚಂದನ್ ತಂಡದಿಂದ ಹಾಸ್ಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.


ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಅವರ ‘ಸಂಗೀತ ನೃತ್ಯ ಸಂಗಮ’ ಕೃತಿಯನ್ನು ಹಲೋ ಹಾಸನ್ ದಿನಪತ್ರಿಕೆಯ ಸಂಪಾದಕರಾದ ರವಿ ನಾಕಲಗೋಡು ಲೋಕಾರ್ಪಣೆ ಮಾಡುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಜಿಲ್ಲಾಧ್ಯಕ್ಷರು ಡಾ. ಹೆಚ್.ಎಲ್. ಮಲ್ಲೇಶ್‍ಗೌಡರು ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ. ಎಂ.ಡಿ. ಸುದರ್ಶನ್, ಕ.ಸಾ.ಪ ಮಾಜಿ ಅಧ್ಯಕ್ಷರು ನಾಯಕರಹಳ್ಳಿ ಮಂಜೇಗೌಡರು, ಕ.ಸಾ.ಪ. ಹಾಸನ ತಾ. ಮಾಜಿ ಅಧ್ಯಕ್ಷರು ಜೆ.ಓ.ಮಹಾಂತಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪ್ರೇಕ್ಷಕರು ಕಾರ್ಯಕ್ರಮ ವೀಕ್ಷಿಸಿ ಕಲಾವಿದರನ್ನು  ಪ್ರೋತ್ಸಾಹಿಸ ಬೇಕೆಂದು ಶ್ರೀ ಶಾರದಾ  ಕಲಾಸಂಘದ ಅಧ್ಯಕ್ಷರು ಹೆಚ್.ಜಿ. ಗಂಗಾಧರ್  ಕೋರಿದ್ದಾರೆ.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top