ತುಂಗಾ ಸೇತುವೆಯಿಂದ ನದಿಗೆ ಬಿದ್ದ ಯುವಕ

Chandrashekhara Kulamarva
0

 





ಶಿವಮೊಗ್ಗ: ತುಂಗಾ ಸೇತುವೆಯಿಂದ ನದಿಗೆ ಬಿದ್ದ ಯುವಕ; ನಡೆದ ಘಟನೆ ಏನು?

ಶಿವಮೊಗ್ಗ:  ನಗರದ ತುಂಗಾ ಸೇತುವೆಯ ಮೇಲೆ ನಿನ್ನೆ ರಾತ್ರಿ ಆಕ್ಸಿಡೆಂಟ್ ಸಂಭವಿಸಿದೆ. ಈ ಅಪಘಾತದಲ್ಲಿ ಒಮಿನಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ನಂತರ ನಡೆದ ಜಗಳದಲ್ಲಿ ಓರ್ವ ತುಂಗಾ ನದಿಗೆ ಬಿದ್ದಿದ್ದಾನೆ.

ಇನ್ನೂ ಘಟನೆಯಲ್ಲಿ ನದಿಗೆ ಬಿದ್ದವನ ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ವಿಷಯಗೊತ್ತಾಗುತ್ತಿದ್ದಂತೆ, ಸ್ಥಳೀಯ ಜನರು ಹಾಗೂ ಅಲ್ಲಿದ್ದ ಟ್ರಾಫಿಕ್ ಪೊಲೀಸರು ತುಂಗಾನದಿಗೆ ಇಳಿದು, ಸ್ಟ್ರೆಚ್ಚರ್ ಬಳಿ ಕೆಳಕ್ಕೆ ಬಿದ್ದವನನ್ನ ಮೇಲಕ್ಕೆ ಕರೆತಂದಿದ್ಧಾರೆ. ನಂತರ ಆತನನ್ನ ಮೆಗ್ಗಾನ್ ಆಸ್ಪತ್ರೆ ರವಾನಿಸಿದ್ದಾರೆ.


ಇನ್ನೂ ಜಗಳದಲ್ಲಿದ್ದ ಇನ್ನೊಬ್ಬ ಎಸ್ಕೇಪ್ ಆಗಿದ್ದು, ನದಿಗೆ ಬಿದ್ದು ಪೆಟ್ಟು ತಿಂದವ ಒಮಿನಿ ಚಾಲಕ ದೇವರಾಜ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

..............................................

Post a Comment

0 Comments
Post a Comment (0)
To Top