ಉಡುಪಿ: ಎಂ.ಜಿ.ಎಂ.ಕಾಲೇಜಿಗೆ ನ್ಯಾಕ್ ಮೌಲ್ಯಾಂಕನದಲ್ಲಿ ಎ+ ಗ್ರೇಡ್ ಶ್ರೇಣಿ

Upayuktha
0


ಉಡುಪಿ:
ಮಹಾತ್ಮ ಗಾಂಧಿ ಮೆಮೇೂರಿಯಲ್ ಕಾಲೇಜಿಗೆ ರಾಷ್ಟ್ರ ಮಟ್ಟದ ಮೌಲ್ಯಾಂಕನ ಪರೀಕ್ಷಾರ್ಥ ತಂಡ ನ್ಯಾಕ್ ಪೀರ್ ಕಮಿಟಿ  ದಿನಾಂಕ ಮಾಚ೯30 ಮತ್ತು 31ರಂದು ಸಂದಶ೯ನ ನೀಡಿ ಕಾಲೇಜಿನ ಸವಾ೯ಂಗೀಣ ಪ್ರಗತಿಯ ಕುರಿತಾಗಿ ಪರಿಶೀಲನೆ ಮಾಡಿ A+ ಗ್ರೇಡ್ ಶ್ರೇಯಾಂಕ ವನ್ನು ಪ್ರಧಾನಿಸಿ ಗೌರವಿಸಿದೆ.


ಅಮೃತ ಮಹೇೂತ್ಸವದ ಹೊಸ್ತಿನಲ್ಲಿ ನಿಂತಿರುವ ಉಡುಪಿ ಜಿಲ್ಲೆಯ ಪ್ರಪ್ರಥಮ ಕಾಲೇಜು ಅನ್ನುವ ಹಿರಿಮೆ ಎಂ.ಜಿ.ಎಂ.ಸಂಸ್ಥೆಗಿದೆ. ಅತ್ಯುತ್ತಮ ಶೈಕ್ಷಣಿಕ ಪರಿಸರ ಪರಿಕರ ಅನುಭವಿ ಅಧ್ಯಾಪಕರನ್ನು ಹೊಂದಿರುವ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅತ್ಯುತ್ತಮ ಪ್ಲೇಸ್ ಮೆಂಟ್ ಅವಕಾಶ ಹೊಂದಿರುವ ಶಿಕ್ಷಣ ಸಂಸ್ಥೆಯನ್ನುವ ಹೆಗ್ಗಳಿಕೆಗೆಯೂ ಹೊಂದಿದೆ.ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವಾಗಿ   ಕಾಲೇಜಿನ ಪರಿಸರ ಮೂಡಿಬಂದಿರುವುದು ಕಾಲೇಜಿನ ವ್ಯಕ್ತಿತ್ವ ಅನಾವರಣಗೊಳಿಸಿದೆ ಎಂದು ಸಮಿತಿ ವಿಶೇಷವಾಗಿ ಪ್ರಶಂಸೆ ಮಾಡಿದೆ.


ಇದು ನಾಲ್ಕನೆಯ ಆವತಿ೯ಯಾಗಿ ನ್ಯಾಕ್ ಪೀರ್ ಕಮಿಟಿ ಕಾಲೇಜಿಗೆ ಸಂದಶ೯ನ ನೀಡುತ್ತಿರುವುದು.


ನ್ಯಾಕ್ ಪೀರ್ ತಂಡದ ಮುಖ್ಯಸ್ಥರಾಗಿ ಪ್ರೊ.ಡಾ.ಆರ್.ಎಂ.ಮಿಶ್ರಾ ವೈಸ್ ಚಾನ್ಸಲರ್ ಎ.ಪಿ.ಎಸ್.ವಿ.ವಿ.ರೇವಾ;ಸದಸ್ಯರುಗಳಾಗಿ ಪ್ರೊ.ಡಾ.ಭಾಸ್ಕರ್ ಜ್ಯೇೂತಿ ಬೇೂರಾ ಗೌಹಾತಿ ವಿ.ವಿ.;ಪ್ರೊ.ಡಾ.ಮಹಮ್ಮದ್ ಮೀರಾನ್ ಪ್ರಾಂಶುಪಾಲ ಹಾಜಿ ಕರುತಾ ರೇೂತಾಲ್ ಹೌಡಿಯಾ ಕಾಲೇಜು ತಮಿಳುನಾಡು ಇವರು ಸಂದಶ೯ನ ನೀಡಿ ಮೌಲ್ಯಾಂಕನ ನಡೆಸಿತು.


ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿನಾರಾಯಣ ಕಾರಂತ ;ಕಾಲೇಜಿನ ನ್ಯಾಕ್ ಸಂಯೇೂಜಕ ಪ್ರೊ.ಅರುಣಕುಮಾರ್.ಬಿ.ಕಾಲೇಜಿನ ಸಮಗ್ರ ಬೆಳವಣಿಗೆಯ ಪರಿಚಯವನ್ನು ಮಾಡಿದರು.ಕಾಲೇಜಿನ ಆಡಳಿತ ಮಂಡಳಿ ಮಾಗ೯ದಶ೯ನ ನೀಡಿತು. ಕಾಲೇಜಿಗೆ ಅಮೃತ ವರುಷದ ಸಂದರ್ಭದಲ್ಲಿ ಎ+ಗ್ರೇಡ್ ಶ್ರೇಯಾಂಕ ಶ್ರೇಣಿ  ಗಳಿಸಿರುವುದಕ್ಕೆ ಸಂಸ್ಥೆಯ  ಆಡಳಿತ ಮಂಡಳಿ ಅಭಿನಂದಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top